ಶಾಸಕ ಎಎಸ್ ಪೊನ್ನಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ
admincoorgdaily

ವಿರಾಜಪೇಟೆ;ಶ್ರೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಇತರೆ ಪಕ್ಷದ ಪ್ರಮುಖ ಕಾರ್ಯಕರ್ತರು ವಿರಾಜಪೇಟೆ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಟ್ಟಿರ ಎಸ್ ಪೊನ್ನಣ್ಣ ಅವರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಶಾಸಕ ಪೊನ್ನಣ್ಣ ಅವರ ಕಾರ್ಯ ವೈಖರಿ, ಜನಪರ ಸೇವೆ, ಕಾಳಜಿಯನ್ನು ಮೆಚ್ಚಿ, ಅವರನ್ನು ಬೆಂಬಲಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿರುವುದಾಗಿ ಪಕ್ಷ ಸೇರ್ಪಡೆಗೊಂಡ ಕಾರ್ಯಕರ್ತರು ಹೇಳಿದರು. ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಪಕ್ಷದ ಶಾಲು ಹಾಕಿ ಶಾಸಕರು ಕಾಂಗ್ರೆಸ್ ಪಕ್ಷಕ್ಜೆ ಸ್ವಾಗತಿಸಿದರು.
ಕುರ್ಚಿ ಗ್ರಾಮದ ಕೋಳೆರ ಕುಟುಂಬದ ಕೆ.ಜಿ ಬಾಬು,ಕೆ. ಬಿ. ಗ್ರೇಸಿ,ಕೆ. ಬಿ. ಭವನ, ಕೆ. ಬಿ. ಭುವನ್,ಕೆ. ಜಿ. ಗೌರಮ್ಮ, ಕೆ. ಎಂ.ಜಾನ್ಸಿ, ಕೆ. ಎಂ.ಪ್ರಧಾನ್,ಕೆ. ಪಿ. ಹೇಮಾ, ಕೆ. ಎಸ್. ಸುರೇಶ್,ಕೆ. ಎಸ್. ಪುಷ್ಪ ಲತಾ,ಕೆ. ವಿ. ನೇತ್ರಾ ಇವರು ಇತರ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕರ್ತರಾಗಿದ್ದಾರೆ. ಈ ಸಂದರ್ಭ ಶಾಸಕರ ಆಪ್ತರಾದ ಮಚ್ಚಮಾಡ ಅನೀಶ್ ಮಾದಪ್ಪ ಹಾಗೂ ಮಂಞಿರ ಕುಟ್ಟಪ್ಪ ಅವರು ಹಾಜರಿದ್ದರು.