ಪತ್ರಕರ್ತರ ಚಂದನ್ ನಂದರಬೆಟ್ಟು ಅವರಿಗೆ "ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ-2026
admincoorgdaily

ಮಡಿಕೇರಿ:ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರಥ್ಯದ ಕನ್ನಡ ಭವನ ಕಾಸರಗೋಡು ಇದರ ರಜತ ಸಂಭ್ರಮದ ಶುಭ ಕಾರ್ಯಕ್ರಮವಾದ “ನಾಡು -ನುಡಿ ಸಂಭ್ರಮ-2026 18-01-2026 ರಂದು ಕಾಸರಗೋಡು ಕನ್ನಡ ಭವನ ರಜತ ಮಂಟಪ ವೇದಿಕೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮ ದಲ್ಲಿ ಕೊಡಗು ಜಿಲ್ಲೆಯ ಪತ್ರಕರ್ತ, ಲೇಖಕ ಹಾಗು ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಚಂದನ್ ನಂದರಬೆಟ್ಟು ಅವರಿಗೆ ಕನ್ನಡ ಭವನ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯಾದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ,” 2026 ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.