ನ್ಯಾ.ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿ ಸಂಪೂರ್ಣ ಅವೈಜ್ಞಾನಿಕ; ಟಿ.ಇ.ಸುರೇಶ್ ಆರೋಪ

Mar 3, 2026 - 16:33
 0  138
ನ್ಯಾ.ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿ ಸಂಪೂರ್ಣ ಅವೈಜ್ಞಾನಿಕ; ಟಿ.ಇ.ಸುರೇಶ್ ಆರೋಪ

ಮಡಿಕೇರಿ: ನ್ಯಾ.ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಬಲಗೈ ಜಾತಿಯ ಸಮುದಾಯದ ಮುಖಂಡ ಟಿ.ಇ.ಸುರೇಶ್ ಆರೋಪಿಸಿದರು. ನ್ಯಾ.ನಾಗಮೋಹನ್ ದಾಸ್ ಅವರು ಒಂದು ಜಾತಿಯನ್ನು ಒಲೈಸಿಕೊಳ್ಳಲು ವರದಿಯ ಮುಖಾಂತರ ಪ್ರಯತ್ನಿಸಿದ್ದಾರೆ.

 ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ನಾಟಕ ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕೆಂದು ಒತಾಯಿಸಿದರು. ದೇಶದ ಮೂಲ ನಿವಾಸಿಗಳಲ್ಲಿ ನಾವು ದೇಶದ ಮೊದಲಿಗರು ನಾವೇ ಎಂದಿರುವ ಅವರು, ಪರಿಶಿಷ್ಟ ಜಾತಿಯ ೧೦೧ ಉಪಜಾತಿಯವರು ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ಈಗ ನಮ್ಮ ಮಧ್ಯೆ ಒಡಕು ಮೂಡಿಸಿ ನಾವೇ ಕಿತ್ತಾಡುವಂತೆ ಆಗಿದೆ.

 ಇದು ಪಟ್ಟಭದ್ರ ಹಿತಾಸಕ್ತಿಗಳಿಂದ ನಮ್ಮನ್ನು ಒಡೆದಾಳುವ ನೀತಿಯಾಗಿದೆ. ಇದಕ್ಕೆ ಪರಿಶಿಷ್ಟ ಜಾತಿಯ ೧೦೧ ಉಪಜಾತಿಯವರು ಅವಕಾಶ ನೀಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಬಲಗೈ ಜಾತಿಯ ಸಮುದಾಯದ ಮುಖಂಡರಾದ ಎಚ್.ಪಿ.ವಿಜಯ್ ಕುಮಾರ್, ಜಯರಾಂ, ಎಚ್.ಟಿ.ಶ್ಯಾಂ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0