ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 37 ದತ್ತಿ ಕಾರ್ಯಕ್ರಮ

Jan 22, 2026 - 16:45
 0  105
ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 37 ದತ್ತಿ ಕಾರ್ಯಕ್ರಮ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 37 ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.

ಜಿಲ್ಲಾ ಸಮಿತಿಗೆ 10 ದತ್ತಿ, ಪೊನ್ನಂಪೇಟೆ ತಾಲೂಕು ಸಮಿತಿಗೆ 5 ಕುಶಾಲನಗರ ತಾಲೂಕು ಸಮಿತಿಗೆ 6, ವಿರಾಜಪೇಟೆ ತಾಲೂಕು ಸಮಿತಿಗೆ 5, ಸೋಮವಾರಪೇಟೆ ತಾಲೂಕು ಸಮಿತಿಗೆ 6 ಮತ್ತು ಮಡಿಕೇರಿ ತಾಲೂಕು ಸಮಿತಿಗೆ 5 ದತ್ತಿಗಳನ್ನು ನೀಡಲಾಗಿದ್ದು ಅದನ್ನು ದತ್ತಿಗಳ ಆಶ್ರಯಕ್ಕೆ ತಕ್ಕಂತೆ ನಡೆಸಲು ತೀರ್ಮಾನಿಸಲಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ಮಾತನಾಡಿ, ಕೊಡಗು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 37 ದತ್ತಿಗಳು ಕೊಡಗು ಜಿಲ್ಲೆಯಲ್ಲಿದೆ. 36 ದತ್ತಿಗಳು ಕೊಡಗು ಜಿಲ್ಲೆಯ ದಾನಿಗಳಿಂದ ಸ್ಥಾಪಿತಗೊಂಡಿದೆ. 1 ದತ್ತಿ ದಾವಣಗೆರೆಯ ಮಾಗನೂರು ಬಸಪ್ಪ ಹೆಸರಿನಲ್ಲಿ ಸ್ಥಾಪಿತಗೊಂಡಿದ್ದು, ದಾನಿಗಳ ಆಶಯದಂತೆ ಕೊಡಗು ಜಿಲ್ಲೆಯಲ್ಲಿ ದತ್ತಿ ಉಪನ್ಯಾಸಗಳು ನಡೆಯುತ್ತಿದೆ. ನಮ್ಮ ಆಡಳಿತಾವದಿಯಲ್ಲಿದ್ದ 2000 ಸದಸ್ಯತ್ವವನ್ನು ಇಂದು 3500ಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಮುನೀರ್ ಅಹಮ್ಮದ್, ಪುದಿಯನೆರವನ ರೇವತಿ ರಮೇಶ್, ಪ್ರಮುಖರಾದ ಸಂಪತ್ ಕುಮಾರ್, ವಾಸು ರೈ ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0