ಮಾರ್ಚ್ 29ರಿಂದ 31ರವರೆಗೆ ಕರಡಿಗೋಡು ಬಸವೇಶ್ವರ ದೇವರ ವಾರ್ಷಿಕೋತ್ಸವ

Mar 25, 2026 - 13:51
 0  129
ಮಾರ್ಚ್ 29ರಿಂದ 31ರವರೆಗೆ ಕರಡಿಗೋಡು ಬಸವೇಶ್ವರ ದೇವರ ವಾರ್ಷಿಕೋತ್ಸವ

ಸಿದ್ದಾಪುರ;ಸಮೀಪದ ಕರಡಿಗೋಡು ಗ್ರಾಮದ ಕುಕ್ಕುನೂರು ಕುಟುಂಬದ ಶ್ರೀ ಬಸವೇಶ್ವರ ದೇವರ ವಾರ್ಷಿಕ ಉತ್ಸವ ಇದೇ ಮಾರ್ಚ್ 29, 30 31ರಂದು ನಡೆಯಲಿದೆ.

ತಾ: 29-3-2026 ರ ಭಾನುವಾರ ಸಂಜೆ ಗೋ ಪೂಜೆ, ನಿತ್ಯ ಪೂಜೆಯ ನಂತರ 7:30 ಗಂಟೆಗೆ ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಸ್ಥಾನಕ್ಕೆ ತರುವುದು. ತಾ: 30-3-2026 ರ ಸೋಮವಾರದಂದು ಬೆಳಗ್ಗೆ 8-30 ಕ್ಕೆ ಗಣಪತಿ ಹೋಮ, 10:00 ಕ್ಕೆ ಕಲಶ ಪೂಜೆ,11:00ಕ್ಕೆ ಗಂಗಾ ಸ್ನಾನ ,ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ನಂತರ ಅನ್ನ ಸಂತರ್ಪಣೆ. 3:30ಕ್ಕೆ ದೇವರ ಮನೆ ಮೆರವಣಿಗೆ, ಸಂಜೆ 7 ಗಂಟೆಗೆ ಕೊಂಡ ಪೂಜೆ

ತಾ: 31-3-2026 ರ ಮಂಗಳವಾರ ಬೆಳಗ್ಗೆ 8:00ಗಂಟೆಗೆ ರುದ್ರಪಾರಾ ಯಣ, 10 ಗಂಟೆಗೆ ದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗಂಗಾ ಸ್ನಾನ, ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾಪೂಜೆ, ಹರಕ್ಕೆ ಒಪ್ಪಿಸುವುದು, ತೀರ್ಥ ಪ್ರಸಾದ, ಅನ್ನ ಸಂತರ್ಪಣೆ, ಮಂತ್ರಾಕ್ಷತೆ ಮೇಲಿನ ವಾರ್ಷಿಕೋತ್ಸವದ ಪೂಜಾ ಕೈಕಂಕರ್ಯ ಕಾರ್ಯಕ್ರಮಗಳಿಗೆ ನಾಡಿನ ಸಮಸ್ತ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ಬಸವೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕುಕ್ಕನೂರು ಕುಟುಂಬಸ್ಥರು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0