Kodagu

ಕೇರಳ;ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಪರ ಶಾಸಕ‌ ಎಎಸ್ ಪೊನ್ನಣ್ಣ ಚುನಾವಣಾ ಪ್ರಚಾರ

admincoorgdaily

ಕೇರಳ;ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಪರ ಶಾಸಕ‌ ಎಎಸ್ ಪೊನ್ನಣ್ಣ ಚುನಾವಣಾ ಪ್ರಚಾರ

ಇರಿಟ್ಟಿ; ಕೇರಳ ರಾಜ್ಯ ಚುನಾವಣೆಯ ಮಾನಂದವಾಡಿ ಹಾಗೂ ಸುಲ್ತಾನ್ ಬತ್ತೆರಿ ಉಸ್ತುವಾರಿಯಾಗಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇಂದು ಕಣ್ಣೂರು ಜಿಲ್ಲೆಯ ಪೆರವೂರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಸನ್ನಿ ಜೋಸೆಫ್ ರವರನ್ನು ಭೇಟಿಯಾಗಿ ಶುಭ ಕೋರಿದರು.

 ಹಲವು ಸಮಯ ಅವರೊಂದಿಗೆ ಚರ್ಚಿಸಿದ ಮಾನ್ಯ ಶಾಸಕರು ಬಳಿಕ ಅವರೊಂದಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಕೊಡಗಿನಿಂದ ಶಾಸಕರೊಂದಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು ಸಹ ಉಪಸ್ಥಿತರಿದ್ದರು.