ಕೊಡಗು ಅರಣ್ಯ ಸಂಚಾರಿ ದಳದ ಡಿ.ಸಿ. ಎಫ್ ಆಗಿ ಕಂಬೆಯಂಡ ಗೋಪಾಲ್

Mar 26, 2026 - 20:56
 0  384
ಕೊಡಗು ಅರಣ್ಯ ಸಂಚಾರಿ ದಳದ ಡಿ.ಸಿ. ಎಫ್ ಆಗಿ ಕಂಬೆಯಂಡ ಗೋಪಾಲ್

ಮಡಿಕೇರಿ; ರಾಜ್ಯ ಅರಣ್ಯ ಸೇವೆಗೆ ಸೇರಿದ 7 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮುಂಬಡ್ತಿ ನೀಡಿ ತಕ್ಷಣ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದನ್ಮಯ ಕೊಡಗು ಜಿಲ್ಲೆಯ ತಿತಿಮತಿ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ(ACF) ಸೇವಿಸಲಿಸುತ್ತಿದ್ದ ಕಂಬೆಯಂಡ ಪಿ. ಗೋಪಾಲ್ ರವರನ್ನು ಕೊಡಗು ಜಿಲ್ಲೆಯ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ(DCF) ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ನೇಮಕಗೊಳಿಸಿದೆ.

ಗೋಪಾಲ್ ಕೆ. ಪಿ ರವರು ಮೂಲತಃ ಮಡಿಕೇರಿ ತಾಲೂಕು ಕಕ್ಕಬೆ ಗ್ರಾಮದವರಾಗಿದ್ದು. ಪ್ರಸ್ತುತ ವಿರಾಜಪೇಟೆಯ ನಿವಾಸಿಯಾಗಿದ್ದಾರೆ. ಈ ಹಿಂದೆ ಸಕಲೇಶಪುರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಂತರ ನಾಗರಹೊಳೆ, ಮತ್ತು ತಿತಿಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಚಿವಾಲಯದ ಆದೇಶದಲ್ಲಿ ಕೊಡಿಗಿನ ಇಬ್ಬರಿಗೆ ಮುಂಬಡ್ತಿ ನೀಡಿದೆ. ಮತ್ತೊರ್ವ ಮಡಿಕೇರಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಕಾರ್ಯಪ್ಪ ರವರಿಗೆ ಆನೆ ಕಾರ್ಯಪಡೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಬಡ್ತಿ ಹೊಂದಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0