ಕೊಡಗು ಪತ್ರಕರ್ತರ ಸಂಘ(ರಿ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆ: ನೂತನ ಪದಾಧಿಕಾರಿಗಳ ನೇಮಕ

Mar 24, 2026 - 11:36
 0  175
ಕೊಡಗು ಪತ್ರಕರ್ತರ ಸಂಘ(ರಿ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆ:  ನೂತನ ಪದಾಧಿಕಾರಿಗಳ ನೇಮಕ

ಸುಂಟಿಕೊಪ್ಪ, ಮಾ.23: ಕೊಡಗು ಪತ್ರಕರ್ತರ ಸಂಘ(ರಿ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆಯು ದಿನಾಂಕ ಮಾರ್ಚ್ 21 ರ ಶನಿವಾರದಂದು ಸುಂಟಿಕೊಪ್ಪ ಪಟ್ಟಣದ ಹೋಟೆಲ್ ದ್ವಾರಕ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾದ ಬಿ.ಸಿ. ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆದು, ಉಪಾಧ್ಯಕ್ಷರನ್ನಾಗಿ ನವೀನ್ ಚಿನ್ನಪ್ಪ, ಖಜಾಂಜಿಯಾಗಿ ಕೆ.ಎಸ್.ಅನಿಲ್ ಕುಮಾರ್, ಸಹ ಕಾರ್ಯದರ್ಶಿಯಾಗಿ ರವಿಕುಮಾರ್ ಬಿ.ಎನ್ ಆವರುಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಜಿಲ್ಲಾ ಖಜಾಂಜಿಗಳಾದ ಟಿ.ಕೆ.ಸಂತೋಷ್, ಸಂಘದ ಹಿರಿಯ ಸಲಹೆಗಾರರಾದ ಕೆ.ತಿಮ್ಮಪ್ಪ, ಆರ್.ಕೆ.ಬಾಲಚಂದ್ರ, ಸೇರಿದಂತೆ ಇತರೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0