ಕೊಡಗು ಪತ್ರಕತ೯ರ ಸಂಘದಿಂದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾಟ; ಸಿರಿ ತಂಡದ ವಿರುದ್ದ ಸುಗ್ಗಿ ತಂಡದ ಜಯಭೇರಿ ; ಜನಪ್ರತಿನಿಧಿಗಳ ತಂಡದ ವಿರುದ್ದ ಅಧಿಕಾರಿಗಳ ತಂಡದ ಗೆಲುವು!
ಮಡಿಕೇರಿ; ಕೊಡಗು ಪತ್ರಕತ೯ರ ಸಂಘ ಮತ್ತು ಪತ್ರಕತ೯ರ ಕ್ಷೇಮಾಭಿವೖದ್ದಿ ಸಮಿತಿ ವತಿಯಿಂದ ಆಯೋಜಿತವಾಗಿದ್ದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಗ್ಗಿ ತಂಡವು ಸಿರಿ ತಂಡದ ವಿರುದ್ದ ಜಯಗಳಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಪ್ರದಶ೯ನ ಪಂದ್ಯದಲ್ಲಿ, ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ, ಸೋಮವಾರಪೇಟೆ ತಹಶೀಲ್ದಾರ್ ಕೖಷ್ಣಮೂತಿ೯ ನೇತೖತ್ವದ ಅಧಿಕಾರಿಗಳ ತಂಡವು, ಮಹೇಶ್ ಜೈನಿ ನಾಯಕತ್ವದ ಜನಪ್ರತಿನಿಧಿಗಳ ತಂಡದ ವಿರುದ್ದ 45 ರನ್ ಗಳ ಅಂತರದ ಗೆಲವು ಗಳಿಸಿತು. ನಿತಿನ್ ಚಿಕ್ಕಿ ಆಲ್ ರೌಂಡರ್ ಆಟಗಾರನಾಗಿ ವಿಜೖಂಭಿಸಿದರೆ ಮಹೇಶ್ ಜೈನಿ ಬ್ಯಾಟಿಂಗ್ , ಉದ್ಯಮಿ ಎಡಿಕೇರಿ ಪ್ರಸನ್ನ ಬೌಲಿಂಗ್ ನಲ್ಲಿ ಗಮನ ಸೆಳೆದರು.
ನಂತರ ಪತ್ರಕತ೯ರ ತಂಡಗಳಾದ ಸಿರಿ, ಸುಗ್ಗಿ, ಹೊನ್ನು ಮತ್ತು ಸಮೖದ್ದಿ ತಂಡಗಳ ನಡುವೆ ಕ್ರಿಕೆಟ್ ಲೀಗ್ ಪಂದ್ಯಾಟ ಜರುಗಿತು. ಸುರೇಶ್ ಬಿಳಿಗೇರಿ ನಾಯಕತ್ವದ ಸುಗ್ಗಿ ತಂಡವು ಕುಡೆಕಲ್ ಸಂತೋಷ್ ನಾಯಕತ್ವದ ಸಿರಿ ತಂಡದ ವಿರುದ್ದ 15 ರನ್ ಗಳ ಅಂತರದಿಂದ ಗೆಲವು ಸಾಧಿಸಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರ ಟಿ.ಪಿ. ರಮೇಶ್, ಅಗತ್ಯವುಳ್ಳ ಪತ್ರಕತ೯ರ ಆರೋಗ್ಯ ಸಮಸ್ಯೆಗೆ ಕಾಲದಿಂದ ಕಾಲಕ್ಕೆ ಆಥಿ೯ಕ ನೆರವು ನೀಡುವ ನಿಟ್ಟಿನಲ್ಲಿ ಕ್ಷೇಮಾಭಿವೖದ್ದಿ ಸಮಿತಿಯು ಆಥಿ೯ಕ ಕ್ರೋಡೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾಯ೯ ಎಂದರು.
ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಸಂಘವು ಜಿಲ್ಲೆಯಾದ್ಯಂತ 4 ತಾಲೂಕು ಸಂಘಗಳ ಮೂಲಕ ಸಕ್ರಿಯ ಸದಸ್ಯರನ್ನೊಳಗೊಂಡು ಸ್ವಾಸ್ಥ್ಯ, ಸದೖಡ ಮತ್ತು ಸುಂದರ ಸಮಾಜ ನಿಮ೯ಣಕ್ಕಾಗಿ ಅನೇಕ ಜನಪರ ಕಾಯ೯ಕ್ರಮ ಹಮ್ಮಿಕೊಂಡು ಬರುತ್ತಿದೆ. ಸಂಕ್ರಾಂತಿ ಹಿನ್ನಲೆಯಲ್ಲಿ ಸಂಕ್ರಾಂತಿ ಸಂಭ್ರಮವನ್ನು ಸಹಯಾಥ೯ ಕ್ರಿಕೆಟ್ ಪಂದ್ಯಾಟದ ಮೂಲಕ ಯಶಸ್ವಿಯಾಗಿ ಕ್ಷೇಮಾಭಿವೖದ್ದಿ ಸಮಿತಿ ವತಿಯಿಂದ ಆಯೋಜಿಸಲಾಗಿದೆ ಎಂದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಏಕೈಕ ಮಹಿಳಾ ಆಟಗಾತಿ೯ಯಾಗಿ ಮೈದಾನಕ್ಕಿಳಿದ ಚಂಪಾಗಗನ ಅವರನ್ನೂ ಅನಿಲ್ ಅಭಿನಂದಿಸಿದರು. ಕೊಡಗು ಪತ್ರಕತ೯ರ ಸಂಘದ ಕ್ಷೇಮಾಭಿವೖದ್ದಿ ಸಮಿತಿಯ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ, ಸಂಘದ ಸದಸ್ಯರ ಹಿತಕ್ಕಾಗಿ ಮತ್ತು ಆರೋಗ್ಯ ಸಮಸ್ಯೆ ಕಾಡಿದಾಗ ಆಥಿ೯ಕ ನೆರವು ನೀಡುವ ಉದ್ದೇಶದಿಂದ ಕ್ಷೇಮಾಭಿವೖದ್ದಿ ಸಮಿತಿ ಮೂಲಕ ಆಥಿ೯ಕ ಸಂಪನ್ಮೂಲ ಕ್ರೋಡೀಕರಿಸಲಾಗಿದೆ.
ಕ್ರಿಕೆಟ್ ಪಂದ್ಯಾಟಕ್ಕೆ ಸದಸ್ಯರಿಂದ ಉತ್ತಮ ಸ್ಪಂದನ ದೊರಕಿದ್ದು, ದಾನಿಗಳೂ ಕೂಡ ಪತ್ರಕತ೯ರ ಕ್ಷೇಮಾಭಿವೖದ್ದಿಗಾಗಿ ಸಹಾಯ ನೀಡಿದ್ದಾರೆ ಎಂದು ಸ್ಮರಿಸಿದರು. ಕೊಡಗು ಅಭಿವೖದ್ದಿಸಮಿತಿಯ ಸಂಚಾಲಕ ದಾವೂದ್ ಮಾತನಾಡಿ, ಜನರಲ್ ತಿಮ್ಮಯ್ಯ ಮೈದಾನಕ್ಕೆ ಇನ್ನಾದರೂ ಸೂಕ್ತ ಕಾಯಕಲ್ಪದ ಅಗತ್ಯವಿದೆ. ಕ್ರೀಡಾಪಟುಗಳಿಗೆ ಈ ಕ್ರೀಡಾಂಗಣ ಮತ್ತಷ್ಟು ಸ್ಪೂತಿ೯ ನೀಡುವ ತಾಣವಾಗಬೇಕೆಂದು ಕೋರಿದರು.
ಮುಂದಿನ ದಿನಗಳಲ್ಲಿ ಕ್ರಿಕೆಟ್ ನಂತೆಯೇ ಸಂಘವು ಕಬ್ಬಡಿ ಪಂದ್ಯಾಟ ಆಯೋಜಿಸಲಿ ಎಂದೂ ದಾವೂದ್ ಸಲಹೆ ನೀಡಿದರು. ಕೊಡಗು ಅಭಿವೖದ್ದಿ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಸನ್ನ ಭಟ್, ಪತ್ರಕತ೯ರು ಸಮಾಜದ ಹಿತಕ್ಕಾಗಿ ಸಕ್ರಿಯವಾಗಿ ಕಾಯ೯ನಿವ೯ಹಿಸುತ್ತಿರುವುದನ್ನು ಶ್ಲಾಘಿಸಿದರು.
ಕೊಡಗು ಪತ್ರಕತ೯ರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಸಮಾಜಮುಖಿಯಾಗಿರುವ ಸದಸ್ಯರನ್ನೊಳಗೊಂಡ ಸಂಘವು ಜನಹಿತಕ್ಕಾಗಿ ಕಾಯ೯ಕ್ರಮಗಳನ್ನು ಆಯೋಜಿಸುತ್ತಿರುವುದು ಮೆಚ್ಚತಕ್ಕದ್ದು ಎಂದರು. ಸಂಘದ ನಿದೇ೯ಶಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕ್ಷೇಮಾಭಿವೖದ್ದಿ ಸಮಿತಿಯ ಪ್ರಧಾನ ಕಾಯ೯ದಶಿ೯ ಅರುಣ್ ಕೂಗ್೯ ವಂದಿಸಿದರು.
ಕಾಯ೯ಕ್ರಮದಲ್ಲಿ ಕೆ. ನಿಡಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ವೀಕ್ಷಕ ವಿವರಣೆಗಾರ ಅ್ಯರಿಸ್, ಸೋಮವಾರಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಎಚ್.ಎಸ್. ಹರೀಶ್ ಕುಮಾರ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಷ್ ಭೂತನಕಾಡು, ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಮುಧೋಶ್ ಪೂವಯ್ಯ, ಪೊನ್ನಂಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ರಾಜ್ ಕುಶಾಲಪ್ಪ, ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ , ತಾಂತ್ರಿಕ ಸಮಿತಿ ಸಂಚಾಲಕ ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.
ಸಂಕ್ರಾಂತಿ ಸಂಭ್ರಮದ ಹಿನ್ನಲೆಯಲ್ಲಿ ಪಿ.ಎಂ. ರವಿ ಕಲ್ಪನೆಯಲ್ಲಿ ವೇದಿಕೆಯನ್ನು ಕಬ್ಬು, ಮಡಕೆ, ತೋರಣಗಳಿಂದ ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಪಂದ್ಯಾಟದ ಅಂಪೈರ್ ಗಳಾಗಿ ರಮೇಶ್, ಸಚಿನ್, ಮಂಜು ಕಾಯ೯ನಿವ೯ಹಿಸಿದ್ದರು. ಪ್ರಶಸ್ತಿ ವಿಜೇತರು - ಪಂದ್ಯ ಪುರುಷೋತ್ತಮ ಮತ್ತು ಉತ್ತಮ ದಾಂಡಿಗ - ಸುಗ್ಗಿ ತಂಡದ ವಿವೇಕ್ ಮೋಗೇರ,, ಉತ್ತಮ ಎಸೆತಗಾರ ಹೊನ್ನು ತಂಡದ ಮೋಹನ್ ರಾಜ್, ಉತ್ತಮ ಗೂಟ ರಕ್ಷಕ ಸಿರಿ ತಂಡದ ಹನೀಫ್, ಸರಣಿ ಪುರುಷೋತ್ತಮ - ಸಿರಿ ತಂಡದ ಖಲೀಲ್.