ಕಳಂಕಿತ ಸಚಿವ ಹರ್ ದೀಪ್ ಸಿಂಗ್ ರನ್ನು ಪದವಿಯಿಂದ ಕಿತ್ತುಹಾಕಿ;ಕೊಡಗು ಮಹಿಳಾ ಕಾಂಗ್ರೆಸ್ ಒತ್ತಾಯ

Feb 28, 2026 - 11:00
 0  626
ಕಳಂಕಿತ ಸಚಿವ ಹರ್ ದೀಪ್  ಸಿಂಗ್ ರನ್ನು ಪದವಿಯಿಂದ ಕಿತ್ತುಹಾಕಿ;ಕೊಡಗು ಮಹಿಳಾ ಕಾಂಗ್ರೆಸ್ ಒತ್ತಾಯ

ಮಡಿಕೇರಿ ಜಗತ್ತನ್ನೇ ತಲ್ಲಣಗೊಳಿಸಿದ ಕ್ರೂರಿ ಕಾಮುಕ ಜೆಪ್ರಿ ಎಫ್ರ್ಸ್ಟೀನ್ ನೊಂದಿಗೆ ಸಂಪರ್ಕ ಹೊಂದಿದರುವ ಆರೋಪ ಹೊಂದಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಹಾಗೂ ಬಿಜೆಪಿ ಮುಖಂಡ ಹರ್ ದೀಪ್ ಸಿಂಗ್ ಪೂರಿ ಯವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿರವರ ನಿರ್ದೇಶನದ ಮೇರೆಗೆ ಶುಕ್ರವಾರ ಸಂಜೆ ಮಡಿಕೇರಿ ನಗರದ ಇಂದಿರಾಗಾಂಧಿ ವೃತ್ತದಿಂದ ಮೊಂಬತ್ತಿ ಹಚ್ಚಿ ಹಳೆಖಾಸಗಿ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ಮೂಲಕ ಸಾಗಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ದ ಘೋಷಣೆ ಕೂಗುತ್ತಾ ಸಾಗಿ ಅಜ್ಜಮಾಡ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಸಿದರು.

 ಕೊಡಗು ಜಿಲ್ಲಾ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ರವರು ಮಾತನಾಡಿ ಹದಿಹರೆಯದ ಬಾಲಕಿಯರನ್ನು ಅಪಹರಿಸಿ ಖಾಸಗಿ ದ್ವೀಪದಲ್ಲಿ ಬಂಧಿಸಿ ಪ್ರಭಾವಿ ವ್ಯಕ್ತಿಗಳಿಗೆ ಲೈಂಗಿಕ ಕ್ರಿಯೆಗಳಿಗೆ ಬಳಸಿಕೊಂಡು ಜಗತ್ತಿನ ಅನೇಕ ಪ್ರಭಾವಿಗಳನ್ನು ಅಪರಾಧ ಕೃತ್ಯದಲ್ಲಿ ಭಾಗಿಯಾಗುವಂತೆ ಮಾಡಿದ ಜೆಫ್ರಿ ಎಫ್ಸ್ಟ್ರೀನ್ ನಂತಹ ಪಾತಕಿಯೊಂದಿಗೆ ಕೇಂದ್ರ ಸಚಿವ ಹರ್ ದೀಪ್ ಸಿಂಗ್ ಪೂರಿ ಸಂಪರ್ಕ ಹೊಂದಿದ್ದು ಬಹಿರಂಗವಾಗಿದ್ದು ಇಂತಹ ಕಳಂಕಿತರನ್ನು ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾಕೆ ಮುಂದುವರಿಸಿದ್ದಾರೆ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರದಲ್ಲಿ ಅತ್ಯಾಚಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಹರ್ ದೀಪ್ ಸಿಂಗ್ ಪುರಿರವರ ಬಂಧನ ವಾಗುವವರೆಗೆ ಮಹಿಳಾ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

 ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ರವರು ಮಾತನಾಡಿ ಎಫ್ಸ್ಟ್ರೀನ್ ಫೈಲ್ ನಲ್ಲಿ ಹೆಸರು ಬಹಿರಂಗಗೊಂಡಿರುವ ಬ್ರಿಟನ್ ಮಾಜಿ ಯುವರಾಜ, ನಾರ್ಜೇನಿಯಾದ ಮಾಜಿ ಪ್ರಧಾನಿ ಸೇರಿದಂತೆ ಅನೇಕ ದೇಶದ ಪ್ರಮುಖ ವ್ಯಕ್ತಿಗಳ ಬಂಧನವಾಗಿದೆ. ವಿಶ್ವ ಸಂಸ್ಥೆ, ಅಮೇರಿಕಾದ ಸೆನೆಟ್ ಸದಸ್ಯರು ರಾಜಿನಾಮೆ ನೀಡಿದ್ದಾರೆ.ಆದರೆ ಭಾರತದ ಮಾನ ಹರಾಜು ಆಗಿರುವ ಘಟನೆ ನಡೆದಿದ್ದರು ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿರುವುದು ನಾಚಿಗೆಗೇಡಿನ ವಿಷಯ ಎಂದು ಖಂಡಿಸಿದರು.

ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿ,ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ,ಕೆ.ಪಿ.ಸಿ.ಸಿ ಸದಸ್ಯರಾದ ಬೇಕಲ್ ರಮಾನಾಥ್, ಕೊಕ್ಕಂಡ ರೂಪಾ ಭೀಮಯ್ಯ, ಪ್ರಮುಖರಾದ ಸುನಿತಾ ಮಂಜುನಾಥ್, ಪಂಕಜ,ಶ್ರೀಜಾ ಸಾಜಿ,ಆಶಾ ಪೂಣಚ್ಚ,ಸುಮಿತಾ ಎಂ.ಜಿ.ಧನ್ಯ,ಸುನಿತಾ ರಾಜನ್,ಪಾರ್ವತಿ ಫ್ಯಾನ್ಸಿ,ಲೀಲಾ ಶೇಷಮ್ಮ,ಶಿವಮ್ಮ,ಮೀನಾಜ್ ಪ್ರವೀಣ್,ಶ್ರೀಮತಿ ಬಂಗೇರ,ವೀಣಾಕ್ಷಿ, ಜಯಮ್ಮ,ಭಾಗ್ಯಮ್ಮ,ಸವಿತ,ವಿಮಲ, ಉದಯ ಚಂದ್ರಿಕ,ಪವಿತ್ರ, ಜಿ.ಸಿ.ಜಗದೀಶ್, ಮಂಡಿರ ಸದಾ ಮುದ್ದಪ್ಪ,ಚಂದ್ರಶೇಖರ್, ಕವನ್ ಕೊತ್ತೋಳಿ,ದಿನೇಶ್ ಕೆ.ಆರ್,ನಿರಂಜನ್,ಅರ್ಜುನ್,ಶರಣ್, ಸುರೇಶ್, ಪ್ರತಾಪ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 1
Sad Sad 0
Wow Wow 0