ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿ ಮಾಡಿದ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ (ರಿ) ಪದಾಧಿಕಾರಿಗಳು
admincoorgdaily

ಮಡಿಕೇರಿ: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ (ರಿ) ಕೊಡಗು ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಮಂತರ್ ಗೌಡ ರವರನ್ನು ಭೇಟಿ ಮಾಡಿ ಮುಂದಿನ ವರ್ಷ ನಡೆಯಲಿರುವ 21 ನೇ ವರ್ಷದ ಮುಸ್ಲಿಂ ಕಪ್ ಕ್ರೀಡಾಕೂಟಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಬಿ ಸತೀಶ್,ಕೊಡಗು ಮುಸ್ಲಿಂ ಸ್ಫೋಟ್ಸ್ ಟ್ರಸ್ಟ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಕುಪ್ಪೊಡಂಡ, ಉಪಾಧ್ಯಕ್ಷರಾದ ಅಬ್ದುಲ್ ರಜಾಕ್ ಸೋಮವಾರಪೇಟೆ , ಪ್ರಧಾನ ಕಾರ್ಯದರ್ಶಿ ಆದಂ,ಸಹ ಕಾರ್ಯದರ್ಶಿ ಹ್ಯಾರಿಸ್,ಖಜಾಂಚಿ ಮುಜೀಬ್ ನಿರ್ದೇಶಕರುಗಳಾದ ಭಾಷಾ ಕುಶಾಲನಗರ, ಆತಿಫ್ ಮನ್ನಾ, ರಝಾಕ್ ಉಪಸ್ಥಿತರಿದ್ದರು.