ಮಾಜಿ ಸಚಿವ ಭೀಮಣ್ಣಖಂಡ್ರೆ ನಿಧನಕ್ಕೆ ಕೊಡಗು ವೀರಶೈವ ಮಹಾಸಭಾ ಸಂತಾಪ

Jan 17, 2026 - 13:23
 0  303
ಮಾಜಿ ಸಚಿವ ಭೀಮಣ್ಣಖಂಡ್ರೆ ನಿಧನಕ್ಕೆ ಕೊಡಗು ವೀರಶೈವ ಮಹಾಸಭಾ ಸಂತಾಪ

ಕುಶಾಲನಗರ : ನಾಡು ಕಂಡ ಧೀಮಂತ ನಾಯಕ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಗಾಂಧೀಜಿ ಯವರ ವಿಚಾರಧಾರೆಗಳ ಚಿಂತಕ, ಮಾಜಿ ಸಚಿವ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಭೀಮಣ್ಣ ಖಂಡ್ರೆ ನಿಧನಕ್ಕೆ ಕೊಡಗು ವೀರಶೈವ ಮಹಾಸಭಾದ ವತಿಯಿಂದ ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಸಂತಾಪ ಕೋರಲಾಯಿತು.

 ಮಹಾಸಭಾ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ‌.ಶಿವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಂಬಶಿವಯ್ಯ, ಸಹ ಕಾರ್ಯದರ್ಶಿ ಎಂ.ಎಸ್.ಗಣೇಶ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್, ಕಾರ್ಯದರ್ಶಿ ಧರ್ಮೇಂದ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೋಶಾಧಿಕಾರಿ ಕೆ.ಪಿ.ಪರಮೇಶ್, ಸಮಾಜದ ಪ್ರಮುಖರಾದ ಎಂ.ಎಸ್.ಲೋಕೇಶ್, ಸಹಕಾರ ಸಂಘಧ ಸಿಇಒ ಬಸವಣ್ಣಯ್ಯ, ಕಾವ್ಯ, ಭೂಮಿಕಾ, ಪರಶಿವಮೂರ್ತಿ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0