ಕೊಡ್ಲಿಪೇಟೆ: ಯುವಕನ ಮೇಲೆ ದೌರ್ಜನ್ಯ: ಇಬ್ಬರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು
ಕೊಡ್ಲಿಪೇಟೆ: ಸಮೀಪದ ದೊಡ್ಡಕೊಡ್ಲಿ ನಿವಾಸಿ ಸುರೇಶ.ಡಿ.ಆರ್(ಅಭಿ) ಎಂಬ ಯುವಕನನ್ನು ಅವರೆದಾಳು ಗ್ರಾಮದಲ್ಲಿ ಅಡ್ಡಗಟ್ಟಿ ದೌರ್ಜನ್ಯ ನಡೆಸಿದ ಇಬ್ಬರು ಆರೋಪಿಗಳ ವಿರುದ್ಧ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಂಜುನಾಥ್(ಮಂಜ) ಹಾಗೂ ಇವರ ಸಹೋದರ ನಿವ್ರತ ಅರಣ್ಯಾಧಿಕಾರಿ ಕೇಶವೇಗೌಡ ಎಂಬುವವರ ಮಗ ಆನಂದ ಇವರಿಬ್ಬರು ಕಿಯಾ ಕಂಪನಿಯಾ ಕೆಎ 12 ಒಅ 4622 ಸಂಖ್ಯೆಯ ಕಾರಿನಲ್ಲಿ ಬಂದು ಟಾಟ ಏಸ್ ವಾಹನದಲ್ಲಿ ಕೊಡ್ಲಿಪೇಟೆ ಕಡೆಗೆ ಹೋಗುತ್ತಿದ್ದಂತಹ ಸುರೇಶ್ ರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಹಿಂಬದಿಯಲ್ಲಿ ಬರುತ್ತಿದ್ದಂತಹ ವಕೀಲ ರೂಪೇಶ್ ಅವರು ಸುರೇಶ್‌ರನ್ನು ತಕ್ಷಣ ಶನಿವಾರಸಂತೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ,ಸೋಮವಾರಪೇಟೆ ಸರ್ಕಾರಿ ಅಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆರೋಪಿಗಳ ವಿರುದ್ಧ ಬಿಎನ್‌ಎಸ್ 2023 126(2), 118(1), 351(2), 352, 304(2) ಮತ್ತು ಎಸ್,ಎಸ್‌ಟಿ ಪ್ರಿವೇಂಷನ್ ಆಫ್ ಅಟ್ರಾಸಿಟಿ ಕಾಯ್ದೆ 1989 ಯಡಿಯಲ್ಲಿ ಪ್ರಕರಣ ದಾಖಲಿಸಕೊಂಡ ಶನಿವಾರಸಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಕುಶಾಲನಗರ ಡಿವೈಎಸ್ಪಿ ರವರು ಭೇಟಿ ತನಿಖೆ ನಡೆಸಿದರು. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇವರನ್ನು ಶೀಘ್ರವಾಗಿ ಬಂಧಿಸುವಂತೆ ದಲಿತ ಸಂಘಟನೆಯ ಪ್ರಮುಖರುಗಳು ಒತ್ತಾಯಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
