ಕೊಡಗು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೋಟ್ರಂಗಡ ತಿಮ್ಮಯ್ಯ ಆಯ್ಕೆ

Dec 18, 2025 - 10:34
Dec 18, 2025 - 10:59
 0  163
ಕೊಡಗು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ  ಕೋಟ್ರಂಗಡ ತಿಮ್ಮಯ್ಯ ಆಯ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷ ಜರುಗಣಪತಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಯಂ. ಓ ದಾಮೋದರ್ , ಒಕ್ಕೂಟದ ಕಾನೂನು ಸಲಹೆಗಾರ ಎಂ. ಎಸ್. ಪೂವಯ್ಯ ಹಾಗು ಜಿಲ್ಲೆಯ ಎಲ್ಲಾ ಖಾಸಗಿ ವಿದ್ಯಾಸಂಸ್ಥೆಗಳ ಸಂಸ್ಥಾಪಕರು ಹಾಜರಿದ್ದರು.

ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲವು ಸುತ್ತೋಲೆಗಳಿಂದ ಖಾಸಗಿ ಶಾಲೆಗಳಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಚರ್ಚಿಸಲಾಯಿತು ಹಾಗು ಜಿಲ್ಲೆಯ ಶಾಸಕರ ಮುಖಾಂತರ ಖಾಸಗಿ ಶಾಲೆಗಳ ಎಲ್ಲಾ ಸಮ್ಯಸಗಳನ್ನು ಸರ್ಕಾರದ ಹಂತದಿಂದ ಬಗೆ ಹರಿಸಿಕೊಳ್ಳಲು ತೀರ್ಮಾನಿಸಲಾಯಿತು.

ಖಾಸಗಿ ಶಾಲೆಗಳ ನಿಯಮಾನುಸಾರ, ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರದೊಂದಿಗೆ ರಾಜ್ಯಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತೀರ್ಮಾನಿಸಲಾಯಿತು.

 ಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗು ಕಾರ್ಯಕಾರಿ ಸಮಿತಿ ಸದಸ್ಯಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಿಮ್ಮಯ್ಯ ಕೋಟ್ರಂಗಡ ಅವಿರೋದವಾಗಿ ಆಯ್ಕೆಯಾದರು. ಮಣಿ ಮೊಹಮ್ಮದ್ ಉಪಾಧ್ಯಕ್ಷರು, ಲಿಕಿತ್ ದಾಮೋದರ್ - ಪ್ರಧಾನ ಕಾರ್ಯದರ್ಶಿ, ಎಂ. ಎಸ್. ಪೂವಯ್ಯ ಕಾನೂನು ಸಲಹೆಗಾರರು ಆಯ್ಕೆಯಾದರು.

 ಕಾರ್ಯಕಾರಿ ಸಮಿತಿ ಸದಸ್ಯರು: ವಿಜು ಎನ್. ಡಿ, ಸಚಿನ್ ವಾಸುದೇವ್, ಧನ್ಯ ಸುಬ್ಬಯ್ಯ, ರವಿ ಟಿ. ವಿ. ಬೋಪಣ್ಣ ಬಿ. ಪಿ., ನಿರನ್ ಉತ್ತಪ್ಪ ಎಂ , ರಶ್ಮಿ ದೀಪಾ ಕೆ. ಎನ್, ಶ್ವೇತಾ ಚೆಂಗಪ್ಪ,ಕು. ಕರೀನಾ ಆಯ್ಕೆಯಾದರು. ಒಕ್ಕೂಟದ ಅಧ್ಯಕ್ಷರಾದ ಜರುಗಣಪತಿಯವರು ಸತತ 9 ವರ್ಷಗಳ ಕಾಲ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದಕ್ಕೆ ಅಭಿನಂದಿಸಲಾಯಿತು . ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯನವರು ಸ್ವಾಗತಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0