ಕುಶಾಲನಗರ; ಮುಂದ್ರಿ 100 ರೂಪ್ಪಿಯ ಹೋಗಿ, ದ್ರಾಕ್ಷಿ 100 ರೂಪಾಯಿ ಆದ ಅಪರೂಪ ಘಟನೆ

Feb 10, 2026 - 23:14
 0  1.6k
ಕುಶಾಲನಗರ; ಮುಂದ್ರಿ 100 ರೂಪ್ಪಿಯ ಹೋಗಿ, ದ್ರಾಕ್ಷಿ 100 ರೂಪಾಯಿ ಆದ ಅಪರೂಪ ಘಟನೆ

ಕುಶಾಲನಗರ: ಕೇರಳಿಗನೊಬ್ಬ ದ್ರಾಕ್ಷಿಯನ್ನು ಮಲಯಾಳಂ ಭಾಷೆಯಲ್ಲಿ ಪ್ರಚಾರಪಡಿಸುತ್ತಾ ಮಾರಾಟ ಮಾಡುತ್ತಿದ್ದನ್ನು ಗಮನಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಲೋಕೇಶ್ ಸಾಗರ್ ಆತನನ್ನು ಪ್ರಶ್ನಿಸಿ, ಇದು ಕೇರಳದ ಸಂತೆ ಅಲ್ಲ ಕನ್ನಡದಲ್ಲಿ ಪ್ರಚಾರಪಡಿಸುವಂತೆ ಹೇಳಿದ ನಂತರ ಆತ ತನಗೆ ಕನ್ನಡದಲ್ಲಿ ತಿಳಿಸಿಕೊಡುವಂತೆ ಕೋರಿದ ಪರಿಣಾಮ ಸ್ವತಃ ಲೋಕೇಶ್ ಸಾಗರ್ ತಮ್ಮ ಧ್ವನಿಯ ಮೂಲಕ ಕನ್ನಡದಲ್ಲಿ ಪ್ರಚಾರಪಡಿಸಲು ಸಹಕರಿಸಿದ ಅಪರೂಪದ ಘಟನೆ ನಡೆದಿದೆ.

ಇದಾದ ಸ್ವಲ್ಪ ಸಮಯದಲ್ಲೇ ಕೇರಳದ ಮಾರಾಟಗಾರ ತನ್ನ ಹಿಂದಿನ ಕೇರಳ ಭಾಷೆಯಲ್ಲಿದ್ದ ನಾಮಪಾಲಕವನ್ನು ವಾಹನದಿಂದ ತೆಗೆದು ಕನ್ನಡದಲ್ಲಿ ದ್ರಾಕ್ಷಿ ಮಾರಾಟದ ನಾಮಫಲಕವನ್ನು ಅಳವಡಿಸಿಕೊಂಡು ತನ್ನ ವ್ಯಾಪಾರವನ್ನು ಮುಂದುವರಿಸಿದ ಘಟನೆ ನಡೆದಿದೆ.

 ಕನ್ನಡ ಭಾಷೆಯ ಬೆಳವಣಿಯ ಬಗ್ಗೆ ವೇದಿಕೆಯಲ್ಲಿ ಕೆಲವರು ಗಂಟೆಗಟ್ಟಲೆ ಅಭಿಮಾನ ಬೆಳೆಸಿಕೊಳ್ಳಲು ಕರೆ ಕೊಡುತ್ತಿರುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ತಾವೇ ಸ್ವತಃ ಕನ್ನಡ ಭಾಷೆ ಪಸರಿಸಲು ಬೀದಿಗಿಳಿದು ಜಾಗೃತಿ ಮೂಡಿಸಿದ್ದು ಒಂದಷ್ಟು ಕನ್ನಡ ಅಭಿಮಾನಿಗಳಿಗೆ ಖುಷಿ ತಂದಿದ್ದಂತು ನಿಜ.

What's Your Reaction?

Like Like 5
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 3