ಕುಶಾಲನಗರ: ಚೇಂಬರ್ ಆಫ್ ಕಾಮರ್ಸ್ ನಿಂದ ಯು.ಜಿ.ಡಿ ಸಂಪರ್ಕ ದರದ ಬಗ್ಗೆ ವಿರೋಧ

Jul 8, 2026 - 18:29
 0  99
ಕುಶಾಲನಗರ: ಚೇಂಬರ್ ಆಫ್ ಕಾಮರ್ಸ್ ನಿಂದ ಯು.ಜಿ.ಡಿ ಸಂಪರ್ಕ ದರದ ಬಗ್ಗೆ ವಿರೋಧ

ಕುಶಾಲನಗರ, ಜು.8 : ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಂಘಟನೆಯು ಬುಧವಾರ ಸ್ಥಳೀಯ ಕನ್ನಿಕಾ ಕನ್ವೆನ್ಷನ್ ಸೆಂಟರ್ ನಲ್ಲಿ ಕರೆದಿದ್ದ ಸಭೆಯಲ್ಲಿ ಹೋಟೆಲ್ , ರೆಸಾರ್ಟ್ ಮಾಲೀಕರು, ನಿರ್ದೇಶಕರು ಹಾಗೂ ಸದಸ್ಯರನ್ನೊಳಗೊಂಡಂತೆ ನಡೆದ ಸಭೆಯಲ್ಲಿ ಕುಶಾಲನಗರದ ಪುರಸಭೆ ವತಿಯಿಂದ ಯುಜಿಡಿ ಸಂಪರ್ಕಕ್ಕೆ ದರ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು ತಕ್ಷಣ ಈ ಆದೇಶವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 ಈಗಾಗಲೇ ನಡೆದಿರುವ ಯುಜಿಡಿ ಕಾಮಗಾರಿ ಕಳಪೆಯಾಗಿದ್ದು, ಕೆಲವು ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಮ್ಯಾನ್ ಹೋಲ್ ಗಳು ಕುಸಿದಿದು ಅದಕ್ಕೆ ಅಳವಡಿಸಿರುವ ಪೈಪ್ ಗಾತ್ರ ಕಡಿಮೆ ಇದ್ದು ಅದರಲ್ಲಿ ನೀರು ಸಾಮಾನ್ಯವಾಗಿ ಹರಿಯಲು ಸಾಧ್ಯವಿಲ್ಲವೆಂದು ಹಲವರು ಅಭಿಪ್ರಾಯಪಟ್ಟರು.

ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ ಪುರಸಭೆಯ ಅಧಿಕಾರಿಗಳು ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುವವರಾಗಿದ್ದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದ್ದು , ಒಂದು ವೇಳೆ ಅದು ಸಾಧ್ಯವಾಗದೇ ಹೋದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸುವುದು ಸೂಕ್ತ ಎಂದರು.

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಈಗಾಗಲೇ ಗೃಹ ಮತ್ತು ವಾಣಿಜ್ಯ ತೆರಿಗೆಗಳಲ್ಲಿ ಹಲವು ಬಗೆಯ ತೆರಿಗೆ ಸೇರಿದ್ದು ಈ ಬಗ್ಗೆ ಕುಶಾಲನಗರ ಪುರಸಭೆಯ ಆಡಳಿತಾಧಿಕಾರಿಯೊಂದಿಗೆ ಚರ್ಚಿಸಲಾಗುವುದು ಎಂದರಲ್ಲದೆ ಪ್ರತಿ ವರ್ಷ ಅದರ ನಿರ್ವಹಣಾ ವೆಚ್ಚವನ್ನು ಕಟ್ಟಲು ವಿರೋಧ ಇರುವುದು ಸಹಜ ಎಂದರು.

ಸಭೆಯ ತೀರ್ಮಾನದಂತೆ ಪುರಸಭೆ ಆಡಳಿತಾಧಿಕಾರಿ ನಿತಿನ್ ಚೆಕ್ಕಿಯವರಿಗೆ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿ, ಶಾಸಕ ಡಾ. ಮಂತರ್ ಗೌಡ ಅವರಿಗೂ ಈ ಬಗ್ಗೆ ಮನದಟ್ಟು ಮಾಡುತ್ತೇವೆ ಎಂದು ತಿಳಿಸಿದರು. ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಕಾರ್ಯದರ್ಶಿ ಚಿತ್ರಾ ರಮೇಶ್, ಖಜಾಂಚಿ ಎನ್.ವಿ. ಬಾಬು,ಪ್ರಶಾಂತ್, ರಮೇಶ್ , ಸದಸ್ಯರಾದ ಬಶೀರ್, ನಾಸಿರ್, ಅರ್ಜುನ್ ಗುಪ್ತ, ಮತ್ತಿತರರಿದ್ದರು. 

ವರದಿ: ಶ್ರೀಧರ್ ನಾರಾಯಣ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0