ಕುಶಾಲನಗರ: ಸಂತ ಸಬಾಸ್ಟಿಯನ್ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ

Dec 25, 2025 - 16:59
 0  239
ಕುಶಾಲನಗರ: ಸಂತ ಸಬಾಸ್ಟಿಯನ್ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ

ಕುಶಾಲನಗರ,ಡಿ೨೫: ಕುಶಾಲನಗರದ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

 ಮೊದಲನೆಯದಾಗಿ ದೇವಾಲಯದ ಗಾಯನ ವೃಂದದವರಿಂದ ಕ್ರಿಸ್ಮಸ್ ಕ್ಯಾರಲ್ ಗೀತೆಗಳನ್ನು ಹಾಡಲಾಯಿತು. ತದನಂತರ ಧರ್ಮ ಕೇಂದ್ರದ ಗುರುಗಳಾದ ವಂದನೀಯ ಗುರು ಮಾರ್ಟಿನ್.ಎಂ ಹಾಗೂ ಮೈಸೂರಿನ ವಂದನೆಯ ಗುರು ಕ್ಲಿಫರ್ಡ್ ರವರು ದಿವ್ಯ ಬಲಿ ಪೂಜೆ ಹಾಗೂ ಕ್ರಿಸ್ಮಸ್ ಸಂದೇಶವನ್ನು ಸಾರಿದರು. ಹಬ್ಬದ ಪ್ರಯುಕ್ತ ದೇವಾಲಯವನ್ನು ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ಧರ್ಮ ಕೇಂದ್ರದ ಯುವಕರಿಂದ ನಿರ್ಮಿಸಿದ ಪ್ರಭು ಯೇಸುವಿನ ಜನನವನ್ನು ಸಾರುವ ಗೋಧಲಿ ಆಕರ್ಷಣೀಯವಾಗಿತ್ತು. ಈ ಸಂದರ್ಭ ಸ್ಥಳೀಯ ಕಾನ್ವೆಂಟ್ನ ಧರ್ಮಭಗಿನೀಯರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0