ಕುಶಾಲನಗರ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ

Mar 27, 2026 - 19:51
 0  122
ಕುಶಾಲನಗರ : ಶ್ರದ್ಧಾಭಕ್ತಿಯಿಂದ  ಜರುಗಿದ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ

ಕುಶಾಲನಗರ : ಸಮೀಪದ ರಾಂಪುರ ಕಣಿವೆ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ರಾಮನವಮಿಯಂದು ಜರುಗಿದ ಶ್ರೀ ರಾಮಲಿಂಗೇಶ್ವರ ವಾರ್ಷಿಕ ಬ್ರಹ್ಮ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ತೇರನ್ನು ಎಳೆದು ಪುನೀತರಾದರು.

 ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಲಕ್ಷ್ಮಣೇಶ್ವರ ಹಾಗೂ ಬಸವೇಶ್ವರ ಎಂಬ ಪಂಚ ಲಿಂಗಗಳ ಸನ್ನಿಧಿಯಲ್ಲಿ ಸೇರಿದ್ದ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು. ರಥೋತ್ಸವ ಅಂಗವಾಗಿ ಸೇರಿದ್ದ ಜಾತ್ರೆಯು ಗ್ರಾಮೀಣ ಸಾಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸಿತು.

ರಥೋತ್ಸವ ಮತ್ತು ಜಾತ್ರೆಯಲ್ಲಿ ಜಿಲ್ಲೆಯ ಜನತೆ ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಪುಷ್ಪಗಳಿಂದ ಧ್ವಜಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ರಾಮ,ಸೀತಾ,ಲಕ್ಷ್ಮಣ, ಆಂಜನೇಯ ಸ್ವಾಮಿಗಳ ವಿಗ್ರಹಗಳನ್ನು ಕುಳ್ಳಿರಿಸಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಮಧ್ಯಾಹ್ನ 2.15 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಹೆಬ್ಬಾಲೆ ಮೂಲೆಹಟ್ಟಿ ಮನೆತನದ ನಾರಾಯಣ ಹಾಗೂ ಕುಟುಂಬಸ್ಥರು ರಥಬಲಿ ಪೂಜೆ ನಡೆಸಿದರು.ಭಕ್ತಾದಿಗಳು ಮೆರವಣಿಗೆ ಯುದ್ದಕ್ಕೂ ರಥಕ್ಕೆ ಈಡುಗಾಯಿಯೊಂದಿಗೆ ಜವನ,ಹೂ,ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು. ಮೆರವಣಿಗೆ ಸಂದರ್ಭ ವರ್ತಕರು ಪಾನಕ,ಮಜ್ಜಿಗೆ ಹಾಗೂ ಸಿಹಿ ವಿತರಿಸಿದರು. ವೇದ ಬ್ರಹ್ಮ ನರಹರಿ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.ಪುರೋಹಿತರಾದ ರಾಘವೇಂದ್ರಚಾರ್ ಪೂಜೆ ಸಲ್ಲಿಸಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ‌.ಎನ್.ಸುರೇಶ್,ಕಾರ್ಯದರ್ಶಿ ಮಾಧವ ನೇತೃತ್ವದಲ್ಲಿ ದಾರ್ಮಿಕ ಕೈಂಕಾರ್ಯಗಳು ಹಾಗೂ ಉತ್ಸವಗಳು ಜರುಗಿದವು. ಭಕ್ತಾದಿಗಳು ರಾಮ,ಲಕ್ಷ್ಮಣ, ಆಂಜನೇಯ ದೇವಾಲಗಳಿಗೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ‌.ಎನ್.ಸುರೇಶ್,ಕಾರ್ಯದರ್ಶಿ ಕೆ.ಎಸ್ ಮಾಧವ ನೇತೃತ್ವದಲ್ಲಿ ರಥೋತ್ಸವ ಹಾಗೂ ಉತ್ಸವಗಳು ಜರುಗಿದವು.

ಭಕ್ತಾದಿಗಳು ರಾಮ,ಲಕ್ಷ್ಮಣ, ಆಂಜನೇಯ ದೇವಾಲಗಳಿಗೆ ತೆರಳಿ ದೇವರ ದರ್ಶನ ಪಡೆದರು. ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಮತ್ತು ಕಂದಾಯ ನಿರೀಕ್ಷಕ ಸಂತೋಷ್ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ದೇವಾಲಯ ಸಮಿತಿ ಗೌರವಾಧ್ಯಕ್ಷ ಇ.ಎಸ್.ಗಣೇಶ್, ಉಪಾಧ್ಯಕ್ಷ ಕೆ.ಕೆ.ಮಂಜುನಾಥ್ ಸ್ವಾಮಿ,ಸಹ ಕಾರ್ಯದರ್ಶಿ ಕೆ.ಎಲ್.ಮಹೇಶ್ ಕುಮಾರ್, ನಿರ್ದೇಶಕರಾದ ಆರ್.ಆರ್.ಜಯರಾಮ್,ಕೆ.ಆರ್‌.ಲೋಕೇಶ್,ಆರ್.ಆರ್.ಮಧು,ಶಿರಗಜೆ ನವೀನ,ಶೇಷಾಚಲ, ಟಿ‌.ಎಂ.ಕಾರ್ತಿಕ್,ಕೆ.ಟಿ.ಶಿವಕುಮಾರ್, ಆರ್.ಎಸ್.ಪ್ರಭುದೇವ್,ಎಚ್.ಎಸ್.ಅನಂತರಾಮು,ಕೆ.ಎಸ್.ರಮೇಶ್,ಕೆ.ಎಂ.ಪ್ರಶಾಂತ,ಕೆ.ಎಂ.ರಾಕೇಶ್,ಕೆ.ಕೆ.ಶ್ರೀನಿವಾಸ್, ಕೆ.ಎಸ್.ನರಸಿಂಹಸ್ವಾಮಿ ಶೆಟ್ಟಿ,ಕೆ.ಆರ್.ಮಂಜುನಾಥ್, ಎಚ್.ಡಿ.ಹೇಮರಾಜ್,ಪರಮೇಶ್,ಕೆ.ಎ.ಪದ್ಮಾವತಿ, ಸಲಹೆಗಾರಾದ ಆರ್.ವಿ.ನಾರಾಯಣ ಮೂರ್ತಿ,ಕೆ.ಸಿ.ನಂಜುಂಡಸ್ವಾಮಿ,ಆರ್.ಆರ್.ಕುಮಾರ್, ಕೆ.ಪಿ.ಪರಮೇಶ್,ಕೆ.ಎಸ್.ಮಹೇಶ್,ಕೆ.ಪಿ‌ನಾಗೇಂದ್ರ,ಎಚ್.ಎಸ್.ದಿವಾಕರ, ಮುಖಂಡರಾದ ಎಚ್.ಎಸ್.ಅಶೋಕ್, ಎಚ್.ಕೆ.ನಟೇಶ್ ಗೌಡ ಇತರರು ಇದ್ದರು.ಸಮಿತಿ ವತಿಯಿಂದ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0