ನೆಲ್ಯಹುದಿಕೇರಿಯಲ್ಲಿ ಕುಶಾಲನಗರ ವಲಯ ಮಟ್ಟದ ಕ್ರೀಡಾಕೂಟ
ಸಿದ್ದಾಪುರ :- ನೆಲ್ಯಹುದಿಕೇರಿಯಲ್ಲಿ ಕುಶಾಲನಗರ ವಲಯ ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಮಂಗಳವಾರ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಫಾ ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪ್ರಮುಖ ದಾನಿ ಹಾಗೂ ಟಿ.ಪಿ. ಕನ್ಸ್ಟ್ರಕ್ಷನ್ ಮಾಲೀಕ ದೇವಸಿ ಕ್ರೀಡಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ರೀಡಾಕೂಟದಲ್ಲಿ ಕುಶಾಲನಗರ ವಲಯದ ಒಟ್ಟು 22 ಶಾಲೆಗಳ ನೂರಾರು ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಲಹಾ ಸಮಿತಿ ಸದಸ್ಯ ಬಸೀರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸದಾಶಿವ, ಟಿ.ಜೆ. ಸೆಬಾಸ್ಟಿಯನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಂತೋಣಿ ವಿ.ವಿ.ಎನ್. ಅಲ್ವಾರಿಸ್, ಉಪಮುಖ್ಯಶಿಕ್ಷಕ ಅನಿಲ್ ಕುಮಾರ್, ಡೋಮಿನೋಸ್ ಸಂಘದ ಮುಖ್ಯ ನಿರ್ದೇಶಕರಾದ ಸೌಕತ್, ಶಿಯಾಬ್ ಹಾಗೂ ಸದಸ್ಯರು, ಆಟೋ ಚಾಲಕರು ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನೆಲ್ಯಹುದಿಕೇರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
What's Your Reaction?
Like
1
Dislike
0
Love
0
Funny
0
Angry
0
Sad
1
Wow
0
