ಕ್ರೀಡೆ ಯುವ ಜನತೆಯಲ್ಲಿ ಒಗ್ಗಟ್ಟಿನ ಸಂದೇಶ ನೀಡುವಂತಾಗಲಿ:ಶಾಸಕ ಎಎಸ್ ಪೊನ್ನಣ್ಣ

ಕ್ರೀಡೆ ಯುವ ಜನತೆಯಲ್ಲಿ ಒಗ್ಗಟ್ಟಿನ ಸಂದೇಶ ನೀಡುವಂತಾಗಲಿ:ಶಾಸಕ ಎಎಸ್ ಪೊನ್ನಣ್ಣ

ಸಿದ್ದಾಪುರ:ಇಲ್ಲಿನ ಬ್ರದರ್ಸ್ ಯೂತ್ ಕ್ಲಬ್ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.

ಸಿದ್ದಾಪುರದ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಈ ಪಂದ್ಯಾಟಕ್ಕೆ ಶುಭ ಕೋರುತ್ತಾ ಮಾತನಾಡಿದ ಶಾಸಕರು, ನಮ್ಮ ನಾಡಿನಲ್ಲಿ ಕ್ರಿಕೆಟ್ ದೊಡ್ಡ ಕ್ರೀಡೆಯಾಗಿ ಹೊರಹೊಮ್ಮಿದೆ. ಅನೇಕ ಪ್ರತಿಭಾವಂತ ಕ್ರಿಕೆಟಿಗರು ಈ ಭಾಗದಲ್ಲಿದ್ದು ಇಂತಹ ಪಂದ್ಯಾಟದಿಂದ ಅವರ ಪ್ರತಿಭೆ ಲೋಕಕ್ಕೆ ತಿಳಿಯುವಂತಾಗಲಿ ಎಂದು ಶುಭ ಹಾರೈಸಿದರು. ಸಂಘಟಿತರಾಗಿ ಆಡುವ ಈ ಆಟವೂ ಯುವ ಜನತೆಯಲ್ಲಿ ಸದಾ ಒಗ್ಗಟ್ಟಾಗಿ ಇರುವ ಸಂದೇಶ ನೀಡಲಿ ಎಂದು ಹಾರೈಸಿದರು.

 ಈ ಸಂದರ್ಭದಲ್ಲಿ ಸಿದ್ದಾಪುರ ವಲಯ ಅಧ್ಯಕ್ಷರು ಪ್ರತೀಶ್, ಪಕ್ಷದ ಪ್ರಮುಖರು ಜಾಫರ್, ಕುಂಡಚ್ಚಿರ ಮಂಜು ದೇವಯ್ಯ, ನೌಶಾದ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.