ಲವ್ ಜಿಹಾದ್ ಪ್ರಕರಣ; ಕೊಡವ ಕಲ್ಚರಲ್ ಅಸೋಸಿಯೇಶನ್ ಖಂಡನೆ

Jan 22, 2026 - 13:58
 0  1.5k
ಲವ್ ಜಿಹಾದ್ ಪ್ರಕರಣ; ಕೊಡವ ಕಲ್ಚರಲ್  ಅಸೋಸಿಯೇಶನ್ ಖಂಡನೆ

ಸಿದ್ದಾಪುರ : ಕೊಡಗು ಜಿಲ್ಲೆಯು ಸರ್ವ ಧರ್ಮೀಯರನ್ನು ಒಳಗೊಂಡ ಶಾಂತಿಯುತವಾದ ಜಿಲ್ಲೆಯಾಗಿದ್ದು ಇದೀಗ ಲವ್ ಜಿಹಾದ್ ಪ್ರಕರಣವು ಬೆಳಕಿಗೆ ಬಂದಿರುವುದು ಇದು ಕೊಡಗಿನ ಶಾಂತಿ ಕದಡುವ ಕೆಲಸಕ್ಕೆ ಎಡೆಮಾಡಿದ್ದು ಈ ಪ್ರಕರಣವನ್ನು ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡಿಸಿದೆ ಎಂದು ಅಸೋಸಿಯೇಶನ್ ಪ್ರಮುಖರಾದ ಪಾಲಚಂಡ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕುರಿತು ಕೊಡವ ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು ಇದು ಖಂಡನೀಯವಾಗಿದೆ .ಅಲ್ಲದೆ ಇದೇ ತಿಂಗಳ‌27 ರಂದು ಲವ್ ಜಿಹಾದ್ ವಿರುದ್ದ ಸಿದ್ದಾಪುರದಲ್ಲಿ ನಡೆಯಲಿರುವ ಪ್ರತಿಭಟನೆಗೆ ನಮ್ಮ ಸಂಸ್ಥೆಯು ಸಂಪೂರ್ಣ ಬೆಂಬಲ‌ ನೀಡಲಿದ್ದೇವೆ ಎಂದರು. ಈ ಸಂಧರ್ಭದಲ್ಲಿ ಕೊಡವ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾದ ನಿವೃತ್ತ ಕಮಾಂಡರ್ ಕುಕ್ಕೇರ ಕೇಶು ಉತ್ತಪ್ಪ,ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 1
Love Love 0
Funny Funny 1
Angry Angry 1
Sad Sad 0
Wow Wow 0