ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ₹ 10.77 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದ ಶಾಸಕ ಎ.ಎಸ್ ಪೊನ್ನಣ್ಣ
ಪೊನ್ನಂಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೊದಲಿಗೆ, ಮೈಸೂರು -ಗೋಣಿಕೊಪ್ಪ ಮುಖ್ಯರಸ್ತೆಯ, ಆಯ್ದ ಭಾಗಗಳಲ್ಲಿ ₹ 3.80 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು.
ತಿತಿಮತಿ ಸೇತುವೆಯಿಂದ ದೇವರಪುರದವರೆಗಿನ ಈ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ತಿತಿಮತಿ ಪಟ್ಟಣ ವ್ಯಾಪ್ತಿಯಲ್ಲಿ ಶಾಸಕರು ನೆರವೇರಿಸಿ, ಈ ಕಾಮಗಾರಿ ಅತಿ ಶೀಘ್ರದಲ್ಲಿ ಗುಣಮಟ್ಟ ಕಾಯ್ದುಕೊಂಡು ಮುಗಿಸಬೇಕೆಂದು ಗುತ್ತಿಗೆದಾರರಿಗೆ ಹೇಳಿದರು. ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆ ಇದಾಗಿರುವುದರಿಂದ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ ಎಂದು ಮಾನ್ಯ ಶಾಸಕರು ಸೂಚನೆ ನೀಡಿದರು.
ಬಳಿಕ, ಮೈಸೂರು-ಪೊನ್ನಂಪೇಟೆ ಮುಖ್ಯರಸ್ತೆಯ, ದೇವರಪುರದಿಂದ ಸೀಗೆತೋಡು ಸೇತುವೆ ತನಕ, ₹ 3.50 ಕೋಟಿ ಅನುದಾನದಲ್ಲಿ, ಸುಮಾರು 4.34 ಕಿ.ಮೀ ಉದ್ದದ ರಸ್ತೆಯ ಉದ್ಘಾಟನೆ ನೆರವೇರಿಸಿದರು.
ದೇವರಪುರ ಪಟ್ಟಣದಲ್ಲಿ ಈ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ ನೆರವೇರಿಸಿದರು.
ಅಲ್ಲಿಂದ, ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯ ರಸ್ತೆಯ, ಬಾಲಾಜಿಯಿಂದ ಜೋಡುಬೆಟ್ಟಿ (ಮಾಯಮುಡಿ-ಬಾಲಾಜಿ-ಜೋಡುಬೆಟ್ಟಿ-ಕುಂದ) ಭಾಗದಲ್ಲಿ ₹ 1.00 ಕೋಟಿ ಅನುದಾನದಲ್ಲಿ, ರಸ್ತೆ ಅಗಲೀಕರಣ ಹಾಗೂ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಾಮಗಾರಿಗೆ ಭೂಮಿ ಪೂಜೆಯನ್ನು ಜೋಡುಬಟ್ಟಿ ಭಾಗದಲ್ಲಿ ಪೂರೈಸಿದರು.
ಬಳಿಕ ಹುದಿಕೇರಿಗೆ ಆಗಮಿಸಿದ ಶಾಸಕರು, ₹ 5 ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಂಡ ಹುದಿಕೇರಿ-ಕಳತ್ತೋಡು ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಹುದಕೇರಿಯ ಮುಕ್ಕಾಟಿಮಾನಿಯಲ್ಲಿ ಮಾನ್ಯ ಶಾಸಕರ ವಿಶೇಷ ಕಾಳಜಿಯಿಂದ ₹ 42 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ 11 ಕೆವಿ ವಿದ್ಯುತ್ ಮಾರ್ಗಕ್ಕೆ ಚಾಲನೆ ನೀಡಿದರು.
ಬಳಿಕ ಮಡಿಕೇರಿ-ಕುಟ್ಟ ರಸ್ತೆಯ ಪೊಕಳತೋಡು ಭಾಗದಲ್ಲಿರುವ ಸೇತುವೆಯ ಮರು ನಿರ್ಮಾಣಕ್ಕಾಗಿ ₹ 2.00 ಕೋಟಿ ಅನುದಾನವನ್ನು ಮಾನ್ಯ ಶಾಸಕರು ಒದಗಿಸಿದ್ದು, ಈ ಕಾಮಗಾರಿಗೆ ಭೂಮಿ ಪೂಜೆಯನ್ನು ಪೂಕಳತೋಡು ಬಳಿ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷರು ನವೀನ್, ದೇವರಪುರ ವಲಯ ಅಧ್ಯಕ್ಷರು ಬಸಂತ್, ಹುದಿಕೇರಿ ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಬೆನ್ನಿ, ಅಣ್ಣಳ್ಳಮಾಡ ಹರೀಶ್, ಡಾ ಮಧ್ಯಸ್ತಾ, ಮಣಿಕಂಠ, ಪಿ ಸಿ ರಾಮು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಪಂಕಜ, ರಜನಿ, ಪುಷ್ಪ, ರವಿನಾ, ಸತೀಶ್, ಕಳಿಚಂಡ ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರು ಚುಬ್ರು, ನವೀನ್, ಟಾಟು ಮೊಣ್ಣಪ್ಪ, ಸೂರಜ್, ವಾಸು ಕುಟ್ಟಪ್ಪ, ಮನೋಹರ್, ರಮೇಶ್, ರೀಕ್ಷಿತ್ ಕಾರ್ಯಪ್ಪ, ಅಜ್ಜಿಕುಟ್ಟಿರ ಪಮು , ಅಜ್ಜಿಕುಟ್ಟಿರ ಗಿರೀಶ್, ಮಂದಣ್ಣ , ಅಜ್ಜಿಕುಟ್ಟಿರ ಪೊನ್ನು, ಸುಧೀರ್, ಮೋಟಯ್ಯ, ದಿಲು, ವಿಶು, ಉದಯ, ಮಧು ತಮ್ಮಯ್ಯ, ಕರುಂಬಯ್ಯ, ಕಿರಿಯಮಡ ಗಣೇಶ್, ಹಾಗೂ ಪಕ್ಷದ ಮುಖಂಡರು ಪ್ರಮುಖರು ಉಪಸ್ಥಿತರಿದ್ದರು.