ವಾಲಿಬಾಲ್ ಅಸೋಸಿಯೇಷನ್ ನೊಂದಿಗೆ ಸಭೆ ನಡೆಸಿದ ಶಾಸಕ‌ ಎಎಸ್ ಪೊನ್ನಣ್ಣ

Jan 19, 2026 - 11:18
Jan 19, 2026 - 11:20
 0  275
ವಾಲಿಬಾಲ್ ಅಸೋಸಿಯೇಷನ್ ನೊಂದಿಗೆ ಸಭೆ ನಡೆಸಿದ ಶಾಸಕ‌ ಎಎಸ್ ಪೊನ್ನಣ್ಣ

ವಿರಾಜಪೇಟೆ: ವಾಲಿಬಾಲ್ ಅಸೋಸಿಯೇಷನ್, ಕೊಡಗು ಇವರೊಂದಿಗೆ ವಿಶೇಷ ಸಭೆಯನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನಡೆಸಿದರು.

ಪೂರ್ವ ನಿಗದಿಯಂತೆ ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಈ ಸಭೆಯಲ್ಲಿ ವಾಲಿಬಾಲ್ ಅಸೋಸಿಯೇಷನ್ ರವರು ಹಲವು ಬೇಡಿಕೆಗಳನ್ನು ಶಾಸಕರ ಮಂದಿಟ್ಟರಲ್ಲದೆ ತಮ್ಮ ಅಸೋಸಿಯೇಷನ್ ವತಿಯಿಂದ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ತನ್ನ ಅವಧಿಯಲ್ಲಿ ಕ್ರೀಡೆಗೆ ಸಾಧ್ಯವಾದಷ್ಟು ಅಧಿಕ ಪ್ರೋತ್ಸಾಹ ನೀಡಲು ನಿರ್ಧರಿಸಿದ್ದು, ವಾಲಿಬಾಲ್ ಅಸೋಸಿಯೇಷನ್ ರವರ ಬೇಡಿಕೆಗಳನ್ನು ತಾನು ಪರಿಗಣಿಸಿ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಾಲಿಬಾಲ್ ಕ್ರೀಡೆಯ ಶ್ರೇಯಕ್ಕೆ ಮತ್ತಷ್ಟು ಶ್ರಮಿಸಬೇಕು ಎಂದು ಕರೆ ನೀಡಿದ ಮಾನ್ಯ ಶಾಸಕರು ಗ್ರಾಮೀಣ ಪ್ರದೇಶದಲ್ಲಿ ಈ ಆಟವನ್ನು ಮತ್ತಷ್ಟು ಖ್ಯಾತಿಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಮತೀನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪಕ್ಷದ ಮುಖಂಡರು ಅಂದಾಯಿ, ಮಂಜು ದೇವಯ್ಯ, ಮಡಿಕೇರಿ ಬ್ಲಾಕ್ ಅಧ್ಯಕ್ಷರು ಹಂಸ ಕೋಟಮುಡಿ ಅಯೂಬ್, ಇಸ್ಮಾಯಿಲ್ ಹಾಗೂ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರುಗಳೂ, ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0