ಪರಕಟಗೇರಿಯಲ್ಲಿ ನೂತನ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

Feb 15, 2026 - 20:45
 0  294
ಪರಕಟಗೇರಿಯಲ್ಲಿ ನೂತನ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ;ತಾಲೂಕಿನ ಬಿರುನಾಣಿಯ ಪರಕಟಗೇರಿಯಲ್ಲಿರುವ ಶ್ರೀ ಧಾರಮಹೇಶ್ವರ ದೇವಾಲಯಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಅನುದಾನವಾದ ₹ 5 ಲಕ್ಷಗಳಲ್ಲಿ ನೂತನವಾಗಿ ನಿರ್ಮಾಣ ಆಗಿರುವ, ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.

 ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಶ್ರೀ ಮಿದೇರೀರ ನವೀನ್, ವಲಯ ಅಧ್ಯಕ್ಷರು ಶ್ರೀ ಕುಪ್ಪಣ್ಣಮಾಡ ಪ್ರೀತಮ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಶ್ರೀ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳ್ಳಮಾಡ ಶ್ರೀ ಲಾಲಾ ಅಪ್ಪಣ್ಣ, ದೇವಸ್ಥಾನ ಸಮಿತಿಯ ಅಧ್ಯಕ್ಷರು ಶ್ರೀ ಕಾಳಿಮಾಡ ಮೊಟ್ಟಯ್ಯ, ಬುಟಿಯಂಡ ತಂಬಿ ನಾಣಯ್ಯ, ಗಣಪತಿ, ಬೊಳೇರ ಅಪ್ಪುಟು, ಕಳಕಂಡ ಜಿತ್ತು, ಚೇತು, ಅಣ್ಣಳ್ಳಮಾಡ ಶನ್ನಿ,ಕಾಳಿಮಾಡ ರಾಶಿಕ, ಕರ್ತಮಾಡ ಸುನಂದ, ನೆಲ್ಲಿರ ಸೋಮಣ್ಣ, ಬೊಟ್ಟಂಗಡ ಜಗದೀಶ್, ಅಣ್ಣಳ್ಳಮಾಡ ಅಮನ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0