Kodagu

30ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ನಾಣಚ್ಚಿ ಹಾಡಿಗೆ ಹೋಗುವ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

admincoorgdaily

30ಲಕ್ಷ ಅನುದಾನದಲ್ಲಿ  ನಿರ್ಮಾಣಗೊಂಡಿರುವ ನಾಣಚ್ಚಿ ಹಾಡಿಗೆ ಹೋಗುವ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ;ತಾಲೂಕಿನ ಕೆ.ಬಾಡಗ ಗ್ರಾಮದಲ್ಲಿ ನೂತನವಾಗಿ 30 ಲಕ್ಷದಲ್ಲಿ ನಿರ್ಮಾಣಗೊಂಡಿರುವ ನಾಣಚ್ಚಿ ಗದೆ ಹಾಡಿಗೆ ಹೋಗುವ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನೂತನ ಟ್ರಾನ್ಸಾಫಾರ್ಮೆರ್ ಗೆ ಚಾಲನೆ ನೀಡಿದರು. ಕ್ಷೇತ್ರ ಪ್ರವಾಸದಲ್ಲಿರುವ ಶಾಸಕರು ಇಂದು ಮಧ್ಯಾಹ್ನ ಕೆ ಬಾಡಗ ಗ್ರಾಮಕ್ಕೆ ಆಗಮಿಸಿದೊಡನೆ ಸ್ಥಳೀಯರು ಶಾಸಕರನ್ನು ಸ್ವಾಗತಿಸಿದರು. ಬಳಿಕ ರಸ್ತೆ ಉದ್ಘಾಟಿಸಿ ಶುಭ ಕೋರಿದ ಮಾನ್ಯ ಶಾಸಕರು, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ವಲಯ ಅಧ್ಯಕ್ಷರು ರಾಮಕೃಷ್ಣ, ಮಾಜಿ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ವಲಯ ಅಧ್ಯಕ್ಷರು ನವೀನ್, ಪಕ್ಷದ ಮುಖಂಡರು ಪಾಲ್ವಿನ್, ತಿತೀರ ಮಂದಣ್ಣ, ಕೆ ಬಾಡಗ ವಲಯ ಅಧ್ಯಕ್ಷರು ರವಿ, ನಾಲ್ಕೇರಿ ವಲಯ ಅಧ್ಯಕ್ಷರು ಕಟ್ಟಿ ಕಾರ್ಯಪ್ಪ, ಅಜ್ಜಿಕುಟ್ಟಿರ ಪೊನ್ನು ಗಿರೀಶ್, ಪಮ್ಮು, ಮಚ್ಚಮಾಡ ಮನು, ಸಿದ್ದು ನಾಚಪ್ಪ,ರಮೇಶ್, ರಾಮಕೃಷ್ಣ, ಕಾಳ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.