Kodagu

ಪಟ್ಟಿ ಶಾಸ್ತಾವು ದೇವಸ್ಥಾನಕ್ಕೆ ವೈಯುಕ್ತಿಕವಾಗಿ ಒಂದು ಲಕ್ಷರೂ ಧನ ಸಹಾಯ ನೀಡಿದ ಶಾಸಕ ಎಎಸ್ ಪೊನ್ನಣ್ಣ

admincoorgdaily

ಕರಿಕೆ:ಗ್ರಾಮ ಭೇಟಿಯಲ್ಲಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದರು. ಜನಸಂಪರ್ಕ ಸಭೆಯಲ್ಲಿ ಉಪಸ್ಥಿತರಿದ್ದ ಪಟ್ಟಿ ಭಾಗದ ಪ್ರಮುಖರು, ತಮ್ಮ ಭಾಗದ ದೇವಸ್ಥಾನಕ್ಕೆ ಧನ ಸಹಾಯ ನೀಡುವಂತೆ ಮನವಿ ಮಾಡಿದರು. ಕೂಡಲೇ ಶಾಸಕರು ತಮ್ಮ ವೈಯುಕ್ತಿಕ ಧನ ಸಹಾಯವಾದ ₹ 1 ಲಕ್ಷವನ್ನು ಚೆಕ್ ಮೂಲಕ ದೇವಸ್ಥಾನದವರಿಗೆ ನೀಡಿದರು.ತಕ್ಷಣ ಸ್ಪಂದಿಸಿದ ಶಾಸಕರಿಗೆ ದೇವಸ್ಥಾನ ಸಮಿತಿ ಕೃತಜ್ಞತೆ ಸಲ್ಲಿಸಿದ್ದಾರೆ.