ಧಾರಾ ಮಹೇಶ್ವರ ದೇವಸ್ಥಾನಕ್ಕೆ ವೈಯುಕ್ತಿಕ ₹1 ಲಕ್ಷ ದೇಣಿಗೆ ನೀಡಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ: ತಾಲೂಕಿನ ಕೆದಮುಳ್ಳೂರಿನ ಗ್ರಾಮಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.
ಧಾರಾ ಮಹೇಶ್ವರ ದೇವಸ್ಥಾನಕ್ಕೆ ವೈಯುಕ್ತಿಕ ₹1 ಲಕ್ಷ ದೇಣಿಗೆ : ಈ ಹಿಂದಿನ ಭೇಟಿ ಸಂದರ್ಭ ತಾವು ದೇವಸ್ಥಾನ ಸಮಿತಿಯವರಿಗೆ ವಾಗ್ದಾನ ನೀಡಿದಂತೆ ಇಂದು ರಸ್ತೆ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭ, ಶಾಸಕರು ದೇವಸ್ಥಾನ ಅಭಿವೃದ್ಧಿಗಾಗಿ ವೈಯುಕ್ತಿಕ ರೂ 1 ಲಕ್ಷಗಳ ಧೇಣಿಗೆಯನ್ನು ನೀಡಿದರು.
ಕೆದಮುಳ್ಳೂರಿನಲ್ಲಿ ಮಾನ್ಯ ಶಾಸಕರ ನೀಡಿದ ವಿಶೇಷ ಅನುದಾನ ₹ 1ಕೋಟಿ 30ಲಕ್ಷ ಅನುದಾನಲ್ಲಿ ಪುನರ್ ನಿರ್ಮಾಣಗೊಂಡ ಲೋಕೋಪಯೋಗಿ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿ ಶುಭ ಕೋರಿದರು. ಈ ಬಾರಿಯ ಮಳೆಯಿಂದ ತೀವ್ರ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಮಾನ್ಯ ಶಾಸಕರು ವಿಶೇಷ ಅನುದಾನವನ್ನು ಸರಕಾರದಿಂದ ಮಂಜೂರು ಮಾಡಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮುಂದುವರಿದು ಮಾತನಾಡಿದ ಶಾಸಕರು, ಕೊಡಗಿನ ಅದರಲ್ಲೂ ವಿಶೇಷವಾಗಿ ವಿರಾಜಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹ 150 ಕೋಟಿಗೂ ಹೆಚ್ಚು ಅನುದಾನವನ್ನು ಸರಕಾರ ಒದಗಿಸಿದ್ದು, ಈ ಸಂದರ್ಭದಲ್ಲಿ ತಾನು ಮಾನ್ಯ ಮುಖ್ಯಮಂತ್ರಿಗಳನ್ನು, ಲೋಕೋಪಯೋಗಿ ಸಚಿವರು ಹಾಗೂ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದರು.
ರಸ್ತೆ ಉದ್ಘಾಟನೆಗೂ ಮೊದಲು ಕ್ಷೇತ್ರದ ಶ್ರೀ ಧಾರಾಮಹೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಮಾನ್ಯ ಶಾಸಕರು ಈ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪ್ರಮುಖರಾದ ನಡಿಕೇರಿಯಂಡ ಮಹೇಶ್, ಕೆಡಿಪಿ ಸದಸ್ಯ ಪ್ರಶಾಂತ್ ಉತ್ತಪ್ಪ, ಜಪ್ರಿ ಉತ್ತಪ್ಪ, ಟಾಟು ಮೊಣ್ಣಪ್ಪ, ಪೆಮ್ಮಂಡ ಮಂಜು ಬೋಪಣ್ಣ, ಮತೀನ್, ಇಸ್ಮಾಯಿಲ್, ಪವಿತ್ರ, ವನಿತಾ ತಾಯಮ್ಮ, ಮಾಳೇಟಿರಾ ಸುಬ್ಬಯ್ಯ, ಜಾಲು ಚಂಗಪ್ಪ. ಬಿ.ಜೆ. ವಿಜಯ್ ಕುಮಾರ್. ವಿನು. ಕರಿನೆರವಂಡ ಜಿತನ್, ಮಿಟ್ಟು ಅಯ್ಯಪ ಪಾಲೆಯ ಂಡ ಮದು ಅರುಣಾ ಕೆ.ಎಸ್ ಚಂಗಪ್ಪ ಮಾಳೇಟಿರ ವಿಜಯ್, ಕಲಿಯಂಡ ಸಂಪನ್ ಅಯ್ಯಪ್ಪ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಪಟ್ಟಡ ರಕ್ಷಿತ್, ಪ್ರಮುಖರು ಉಪಸ್ಥಿತರಿದ್ದರು.