Kodagu

ಅಮ್ಮತ್ತಿಯ ಸಂತ ಅಂತೋಣಿ ಚರ್ಚ್ ಗೆ ಭೇಟಿ ನೀಡಿದ ಶಾಸಕ‌ ಎಎಸ್ ಪೊನ್ನಣ್ಣ:ಕೇಕ್ ಕತ್ತರಿಸಿ ಕ್ರಿಸ್ಮಸ್ ಶುಭಾಶಯ ಕೋರಿದ ಶಾಸಕರು

admincoorgdaily

ಅಮ್ಮತ್ತಿಯ ಸಂತ ಅಂತೋಣಿ ಚರ್ಚ್ ಗೆ ಭೇಟಿ ನೀಡಿದ ಶಾಸಕ‌ ಎಎಸ್ ಪೊನ್ನಣ್ಣ:ಕೇಕ್ ಕತ್ತರಿಸಿ ಕ್ರಿಸ್ಮಸ್ ಶುಭಾಶಯ ಕೋರಿದ ಶಾಸಕರು

ವಿರಾಜಪೇಟೆ: ಅಮ್ಮತಿಯಲ್ಲಿರುವ ಸಂತ ಅಂತೋಣಿ ಚರ್ಚ್ ಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಭೇಟಿ ನೀಡಿದರು.

ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ರವರು ಆಯೋಜಿಸಿದ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಪ್ರಯುಕ್ತ ಸ್ಥಳೀಯ ಕ್ರೈಸ್ತ ಭಾಂದವರು ಮಾನ್ಯ ಶಾಸಕರನ್ನು ಆಗಮಿಸುವಂತೆ ಆಹ್ವಾನಿಸಿದ್ದರು.

 ಕ್ರಿಸ್ಮಸ್ ಹಬ್ಬಾಚರಣೆಯ ದಿನದಂದು ಶಾಸಕರು ಕ್ಷೇತ್ರದಲ್ಲಿ ಅಲಭ್ಯವಿದ್ದ ಕಾರಣ ಇಂದು ತೆರಳಿದ ಶಾಸಕರು ಎಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ಧರ್ಮ ಗುರುಗಳು ಮಾದಲೈ ಮುತ್ತು, ದಕ್ಷಿಣ ಕೊಡಗು ಕ್ರಿಸ್ಟಿಯನ್ ಅಸೋಸಿಯೇಷನ್ ಅಧ್ಯಕ್ಷರು ಎ ಜೆ ಬಾಬು, ಕೂರ್ಗ್ ಕ್ಲಿಫ್ಸ್ ಮಾಲೀಕರದ ಜಾನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.