ಇತಿಹಾಸ ಪ್ರಸಿದ್ಧ ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ
admincoorgdaily

ಮಡಿಕೇರಿ:ಇತಿಹಾಸ ಪ್ರಸಿದ್ಧ ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೊಡಗಿನ ಜನತೆಯ ಪವಿತ್ರ ಹಬ್ಬವಾದ ಪುತ್ತರಿ ಪ್ರಯುಕ್ತ, ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ನಾಡಿನ ಸಮಸ್ತ ಜನತೆಗೆ ಇಗ್ಗುತಪ್ಪ ದೇವರು ಸುಖ-ಶಾಂತಿ ಹಾಗೂ ಸುಭಿಕ್ಷೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಪ್ರತಿ ವರ್ಷದಂತೆ ಈ ವರ್ಷ ಸಹ ಶ್ರೀದೇವರ ಸನ್ನಿಧಿಗೆ ತೆರಳಿದ ಶಾಸಕರು ಜನರೊಂದಿಗೆ ಬೆರೆತು ಪುತ್ತರಿ ಹಬ್ಬದ ಕಾರ್ಯಕ್ರಮದ ಆರಂಭಿಕ ಉತ್ಸವದಲ್ಲಿ ಭಕ್ತಿ ಭಾವದಿಂದ ಭಾಗವಹಿಸಿದರು.
ಪೂಜೆಯ ಬಳಿಕ ನಾಡಿನ ಸರ್ವ ಜನತೆಗೂ ಪುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಅಖಿಲಾ ಕೊಡವ ಸಮಾಜದ ಅಧ್ಯಕ್ಷರು ಪರದಂಡ ಸುಬ್ರಮಣಿ, ದೇವಸ್ಥಾನ ತಕ್ಕ ಮುಖ್ಯಸ್ಥರು, ಪ್ರಮುಖರು ಕಲಿಯಂಡ ಸಂಪನ್ ಅಯ್ಯಪ್ಪ, ಅರುಣ್ ಬೇಬ ಹಾಗೂ ಪ್ರಮುಖರು ಉಪಸ್ಥಿತರಿದ್ದರು.