ಶ್ರೀ ಮಹಾದೇವರ ದೇವಾಲಯಕ್ಕೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

Feb 15, 2026 - 12:17
 0  380
ಶ್ರೀ ಮಹಾದೇವರ ದೇವಾಲಯಕ್ಕೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

ವಿರಾಜಪೇಟೆ; ವಿಧಾನ ಸಭಾ ಕ್ಷೇತ್ರದ ಶ್ರೀ ಹೊಸೂರು, ಬೆಟ್ಟಕೇರಿ, ಕಳತ್ಮಾಡು ಭಾಗದ ಪ್ರಸಿದ್ಧ ಶ್ರೀ ಮಹಾದೇವರ ದೇವಾಲಯಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.

 ಶ್ರೀದೇವರ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದ ಮುಖ್ಯ ಅತಿಥಿಯಾಗಿ ಭೇಟಿ ನೀಡಿದ ಮಾನ್ಯ ಶಾಸಕರು, ಮೊದಲಿಗೆ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಹಾಶಿವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಈ ವಾರ್ಷಿಕೋತ್ಸವ ಸಮಾರಂಭವು ವಿಶೇಷ ಅರ್ಥ ಪಡೆದುಕೊಳ್ಳುತ್ತದೆ. ಶ್ರೀ ದೇವರು ಪ್ರತಿಯೊಬ್ಬರಿಗೂ ಶುಭವಾಗಲಿ ಎಂದು ಹರಿಸಲಿ ಮತ್ತು ನಾಡಿಗೆ ಸುಭಿಕ್ಷೆ ಒದಗಿಸಲಿ ಎಂದು ಪ್ರಾರ್ಥಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ದೇವಸ್ಥಾನದ ಆಡಳಿತ ಅಧ್ಯಕ್ಷರು ಸುಭಾಷ್ ಭೀಮಯ್ಯ, ಕೊಲ್ಲಿರ ದಯಾ ಕಾವೇರಪ್ಪ, ಕೊಲ್ಲಿರ ಉಮೇಶ್, ಜಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0