ಅಭ್ಯತ್ ಮಂಗಲ-ಒಂಟಿಯಂಗಡಿ ಸೇತುವೆ ಹಾಗೂ ರಸ್ತೆ ಅಗಲೀಕರಣ‌ ಕಾಮಗಾರಿಗೆ ಚಾಲನೆ ನೀಡಿದ ಶಾಸಕ‌ ಡಾ.ಮಂತರ್ ಗೌಡ

Nov 23, 2025 - 18:29
 0  498
ಅಭ್ಯತ್ ಮಂಗಲ-ಒಂಟಿಯಂಗಡಿ ಸೇತುವೆ ಹಾಗೂ ರಸ್ತೆ ಅಗಲೀಕರಣ‌ ಕಾಮಗಾರಿಗೆ ಚಾಲನೆ ನೀಡಿದ ಶಾಸಕ‌ ಡಾ.ಮಂತರ್ ಗೌಡ

ಕುಶಾಲನಗರ, ನ 23: ರಾಜ್ಯ ಸರಕಾರದ ರೋಡ್ ಸೇಫ್ಟಿ ಅನುದಾನದಲ್ಲಿ ಅಭ್ಯತ್ ಮಂಗಲ- ಒಂಟಿಯಂಗಡಿಯಲ್ಲಿರುವ ಸೇತುವೆ ಅಗಲೀಕರಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.

 ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 91 ರಲ್ಲಿನ ಒಂಟಿಯಂಗಡಿಯ ಸೇತುವೆ ಅಗಲೀಕರಣ, ವೃತ್ತ ನಿರ್ಮಾಣ, ಹೈಮಾಸ್ಡ್ ದೀಪ ಅಳವಡಿಕೆ ಮತ್ತು ಸೇತುವೆ ಬಳಿ ತೋಡಿಗೆ ತಡೆಗೋಡೆ ನಿರ್ಮಾಣ ಜೊತೆಗೆ ರೂ 1 ಕೋಟಿ ವೆಚ್ಚದಲ್ಲಿ ಒಂಟಿಯಂಗಡಿ-ಸಿದ್ದಾಪುರ, ಒಂಟಿಯಂಗಡಿ-ಚೆಟ್ಟಳ್ಳಿ, ಒಂಟಿಯಂಗಡಿ-ಕುಶಾಲನಗರ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕರು ಭೂಮಿಪೂಜೆ‌ ನೆರವೇರಿಸಿದರು.

ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಶವಂತ್ ದೋಲ್ಪಾಡಿ, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಕಾಂಗ್ರೆಸ್ ವಲಯ ಅಧ್ಯಕ್ಷ ಹನೀಫ್, ಬೂತ್ ಅಧ್ಯಕ್ಷ ನಂದಕುಮಾರ್, ಜ್ಯೋತಿ ನಗರ ಬೂತ್ ಅಧ್ಯಕ್ಷ ಮಜೀದ್ ಕೆ.ಎಂ, ಮುಖಂಡರಾದ ಮಜೀದ್, ರಫೀಕ್, ಮಣಿ, ವಾಲ್ನೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ನೆಲ್ಲಿಹುದಿಕೇರಿ ಗ್ರಾಪಂ ಅಧ್ಯಕ್ಷೆ ಧನಶ್ರೀ, ಸದಸ್ಯ ಮುಸ್ತಾಫ ಜಿಪಂ ಮಾಜಿ ಸದಸ್ಯ ಲತೀಫ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತೀರ್ಥಕುಮಾರ್, ನೆಲ್ಲಿಹುದಿಕೇರಿ ಗ್ರಾ.ಪಂ ಸದಸ್ಯ ಹಕೀಂ‌, ಅಭಿಯಂತರ ಅರ್ಬಾಜ್ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0