ಸುಂದರನಗರಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ: ಸ್ಮಶಾನ ಜಾಗದ ದಾಖಲೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ
ಕುಶಾಲನಗರ,ಜಂ೪: ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸುಂದರನಗರಕ್ಕೆ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ.ಮಂತರ್ ಗೌಡವರು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ನಾಲ್ಕು ದಶಕಗಳಿಂದ ಬಳಕೆಯಲ್ಲಿರುವ ಸುಂದರನಗರ ಸ್ಮಶಾನದ ಜಾಗಕ್ಕೆ ಸೂಕ್ತ ದಾಖಲೆಯಿಲ್ಲದ ಕಾರಣ ಪಂಚಾಯಿತಿ ಅಭಿವೃದ್ಧಿಪಡಿಸಲು ಕಾನೂನು ತೊಡಕುಂಟಾಗುತ್ತಿರುವ ಹಿನ್ನಲೆ ಸ್ಮಶಾನ ಜಾಗದ ದಾಖಲೆ ಸರಿಪಡಿಸುವ ಕುರಿತು ಶಾಸಕರು ಅಧಿಕಾರಿಗಳಿಗೆ ಮಾಹಿತಿ ಪಡೆದರು. ನಂತರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಸುಂದರನಗರ ಸರ್ಕಲ್ ನಲ್ಲಿ ದಿವಂಗತ ಗುಂಡೂರಾವ್ ಅವರ ಕಮಾನು ಹಾಗೂ ಪುತ್ಥಳಿ ನಿರ್ಮಾಣದ ಕುರಿತು ಸ್ಥಳೀಯ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಸ್ಥಳೀಯ ಮುಖಂಡರು ಶಾಸಕರ ಗಮನಕ್ಕೆ ತಂದರು. ಕೂಡಲೇ ಕ್ರಮ ಕೈಗೊಳ್ಳುವಂತೆ ಕೆ.ಐ.ಎ.ಡಿ.ಬಿ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಇಂಡಸ್ಟ್ರಿಯಲ್ ಏರಿಯಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕ್ರಿಯಾಯೋಜನೆ ತಯಾರಿಸುವಂತೆ ತಿಳಿಸಿದರು. ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ನೀಡುವ ಸಲುವಾಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸರ್ಕಾರಿ ನಿವೇಶನ ಇದ್ದಲ್ಲಿ ಶಾಸಕರ ತರುವಂತೆ ತಿಳಿಸಿದರು.
ನಂತರ ಗ್ರಾಮಕ್ಕೆ ಅಂಬೇಡ್ಕರ್ ಭವನ ನಿರ್ಮಾಣದ ಬೇಡಿಕೆಯಿಟ್ಟರು. ಗಣಪತಿ ಪ್ರತಿಷ್ಠಾಪನೆ ಸೇರಿದಂತೆ ಗ್ರಾಮಸ್ಥರ ಬಳಕೆಗೆ ಸಮುದಾಯ ಭವನ ನಿರ್ಮಾಣ, ಕೋರೆ ರಸ್ತೆ ಹಾಗೂ ಊರೊಳೊಗಿನ ರಸ್ತೆಗಳ ಅಭಿವೃದ್ಧಿ, ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ವಾರ್ಡ್ ಸದಸ್ಯರು ಹಾಗೂ ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ.ಮಂತರ್ ಗೌಡರವರು, ಸುಂದರನಗರ ಅಭಿವೃದ್ಧಿ ಶ್ರಮಿಸುವುದರ ಜೊತೆಗೆ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡುವ ಜವಾಬ್ದಾರಿ ತೆಗೆದುಕೊಳ್ಳಲಾಗುವುದು ಎಂದರು.
ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಕ್ಷೇತ್ರದ ಶಾಸಕರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ನಿರಂತರ ಕಾರ್ಯಕ್ರಮಗಳ ನಡುವೆಯೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರಿಗೆ ಧನ್ಯವಾದಗಳು. ಶಾಸಕರು ವಾರ್ಡ್ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್, ನಾನಾ ಇಲಾಕೆಯ ಅಧಿಕಾರಿಗಳು, ಗ್ರಾಮದ ಮುಖಂಡರಾದ ಕಾರ್ತಿಕ್, ತಂಬಿ, ರಫೀಕ್, ಎಸ್.ಎ.ಹರೀಶ್, ಸಂತೋಷ್, ಮಂಜುಕುಟ್ಟಿ, ರವಿ, ಅಭಿಷೇಕ್ ಸೇರಿದಂತೆ ಇನ್ನಿತರ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
1
