ಮದೆನಾಡು ಕಾಡಾನೆ ದಾಳಿ; ಗಾಯಾಳುವಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ

Feb 10, 2026 - 19:46
 0  568
ಮದೆನಾಡು ಕಾಡಾನೆ ದಾಳಿ; ಗಾಯಾಳುವಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಕೆ. ಜಿ.ಭೋಪಯ್ಯ ನವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಭಾನುವಾರ ಕಾಡಾನೆ ದಾಳಿಗೊಳಗಾದ ಮದೆನಾಡು ನಿವಾಸಿ ಪಟ್ಟಡ ಭರತ್ ಕುಮಾರ್ ಅವರ ಆರೋಗ್ಯ ವಿಚಾರಿಸಿದರು.

ಮದೆನಾಡು ಗ್ರಾಮದಲ್ಲಿ ಆನೆ ಹಾವಳಿಯ ಬಗ್ಗೆ ಕಾರ್ಯ ಕರ್ತ ರಿಂದ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಅವರು ಗಾಯಾಳುವಿಗೆ ಸಾಂತ್ವನ ಹೇಳಿ ನಮ್ಮ ಅಧಿಕಾರವಧಿಯಲ್ಲಿ ಆನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಯೋಜನೆ ರೂಪಿಸಲಾಗಿತ್ತು.ಆದರೆ ಅದಿನ್ನೂ ಅನುಷ್ಠಾನಕ್ಕೆ ಬರದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

 ಈಸಂದರ್ಭ ಮದೆ ನಾಡು ಬಿಜೆಪಿ ಕಾರ್ಯಕರ್ತ ಹಾಗೂ ಮದೆ ವಿ ಎಸ್ ಎಸ್ ನಿರ್ದೇಶಕರಾದ ಬೈನರವನ ಇಂದ್ರಕುಮಾರ್, ಕಾಯರ್ ಮಾರ್ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 2
Wow Wow 0