ಮಡಿಕೇರಿ: ಕಸ ಎಸೆದವರಿಗೆ 5,000 ದಂಡ : ಕೊಡಗು ಹಿತರಕ್ಷಣಾ ವೇದಿಕೆ ಕಾರ್ಯದಿಂದ ಬಯಲಾಯ್ತು ಸತ್ಯ

Aug 11, 2026 - 17:19
 0  757
ಮಡಿಕೇರಿ: ಕಸ ಎಸೆದವರಿಗೆ 5,000 ದಂಡ : ಕೊಡಗು ಹಿತರಕ್ಷಣಾ ವೇದಿಕೆ ಕಾರ್ಯದಿಂದ ಬಯಲಾಯ್ತು ಸತ್ಯ

ಮಡಿಕೇರಿ;ನಗರವನ್ನು ಸ್ವಚ್ಛವಾಗಿಡುವಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ನಗರಸಭೆ ಕಠಿಣ ಕ್ರಮಕ್ಕೆ ಮುಂದಾಗಿದೆ. ರಸ್ತೆ ಬದಿ ಕಸ ಎಸೆದ ಮಡಿಕೇರಿ ನಗರಸಭೆಯ ಬೀದಿ ದೀಪ ಕಾಮಗಾರಿ ಗುತ್ತಿಗೆದಾರನಿಗೆ 5,000 ರೂ. ದಂಡ ವಿಧಿಸಿ, ಕಸವನ್ನು ತೆರವುಗೊಳಿಸಲಾಗಿದೆ.

 ರಾಜರಾಜೇಶ್ವರಿ ಶಾಲೆಯಿಂದ ಸಂಪಿಗೆ ಕಟ್ಟೆಗೆ ತೆರಳುವ ರಸ್ತೆಯ ಭಾಗದಲ್ಲಿ ಕಸ ಬಿದ್ದಿರುವ ಬಗ್ಗೆ ಕೊಡಗು ಹಿತರಕ್ಷಣಾ ವೇದಿಕೆಗೆ ಮಾಹಿತಿ ಲಭಿಸಿತ್ತು. ವೇದಿಕೆ ಅಧ್ಯಕ್ಷ ರವಿ ಗೌಡ ಮತ್ತು ಬಾಲಕೃಷ್ಣ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಸವನ್ನು ಪರಿಶೀಲಿಸಿದಾಗ, ಅಲ್ಲಿ ಷಾ ಎಲೆಕ್ಟ್ರಿಕಲ್, ಮಡಿಕೇರಿ‌ ಹೆಸರಿನ ಹಲವು ದಾಖಲೆಗಳು ಮತ್ತು ಶಮಿಉಲ್ಲಾ ಎಂಬ ಹೆಸರಿನ ದಾಖಲೆಗಳು ಪತ್ತೆಯಾಗಿವೆ. ಕೂಡಲೇ ಈ ಬಗ್ಗೆ ವೇದಿಕೆ ವತಿಯಿಂದ ನಗರಸಭೆಯ ಗಮನಕ್ಕೆ ತರಲಾಯಿತು.

 ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಮೊದಲು "ನಾವು ಕಸ ಹಾಕಿಲ್ಲ" ಎಂದು ವಾದಿಸಿದರು. ಆದರೆ ಸ್ಥಳದಲ್ಲಿ ಸಿಕ್ಕ ದಾಖಲೆಗಳ ಬಗ್ಗೆ ವಿವರಿಸಿದಾಗ ತಾವೇ ಕಸ ಎಸೆದಿದ್ದಾಗಿ ಒಪ್ಪಿಕೊಂಡರು. . ಘಟನೆ ಬಗ್ಗೆ ಖಚಿತವಾದ ನಂತರ ನಗರಸಭೆ ವತಿಯಿಂದ 5,000 ರೂ. ದಂಡ ವಿಧಿಸಲಾಯಿತು. ಜೊತೆಗೆ ಕಸವನ್ನು ಅವರ ಗಾಡಿಯಲ್ಲೇ ಬಂದು ತೆರವು ಮಾಡಿಸಲಾಯಿತು. ಸಾರ್ವಜನಿಕರು ಕೂಡ ಸ್ವಚ್ಛತೆಗೆ ಸಹಕರಿಸಬೇಕು" ಎಂದು ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ‌ ತಿಳಿಸಿದ್ದಾರೆ.

What's Your Reaction?

Like Like 3
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0