Kodagu

ಮಡಿಕೇರಿ:ಬಾಡಿಗೆ ಹಣ ಪೂರ್ತಿ ಪಾವತಿಸದೆ ಆಟೋ ಚಾಲಕನನ್ನೇ ಬೆದರಸಿದ ಅಸ್ಸಾಂ ಕಾರ್ಮಿಕರು

admincoorgdaily

ಆಟೋ

ಮಡಿಕೇರಿ, ಮಾ. 5: ಆಟೋ ಒಂದರಲ್ಲಿ ಬಾಡಿಗೆಗೆ ಎಂದು ತೆರಳಿ, ಬಾಡಿಗೆ ಹಣವನ್ನು ಪೂರ್ತಿ ಪಾವತಿಸದೆ ಆಟೋ ಚಾಲಕನನ್ನೇ ಬೆದರಿಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

 ಮಡಿಕೇರಿಯಿಂದ ಗಾಳಿಬೀಡಿಗೆ ದಿನೇಶ್ ಶೆಟ್ಟಿ ಎಂಬವರ ಆಟೋದಲ್ಲಿ ಅಸ್ಸಾಂ ಮೂಲದ ಬಪ್ಪಾಮಿಯ ಹಾಗೂ ರಾಕಿ ಆಲಂ ಎಂಬವರುಗಳು ಬಾಡಿಗೆಗೆ ತೆರಳಿದ್ದು, ಅಲ್ಲಿಗೆ ತಲುಪಿದ ಬಳಿಕ ಬಾಡಿಗೆ ಹಣವನ್ನು ಪೂರ್ತಿಯಾಗಿ ಪಾವತಿಸಲು ಹಿಂದೇಟು ಹಾಕಿದ್ದಾರೆ.

ಇದನ್ನು ಚಾಲಕ ದಿನೇಶ್ ಶೆಟ್ಟಿ ಪ್ರಶ್ನಿಸಿದ ಸಂದರ್ಭಬಪ್ಪಮಿಯ ಹಾಗೂ ರಾಕಿ ಆಲಂ, ಕೃಷ್ಣ, ಸುಶಾಂತ್ ಎಂಬವರುಗಳು ಅವರನ್ನು ಅಡ್ಡಗಟ್ಟಿ ಬೆದರಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಮಡಿಕೇರಿ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.