ಮಡಿಕೇರಿ: ಮಂಡ್ಯದ ಮೂಲದ ಉದ್ಯಮಿಗೆ ಹನಿಟ್ರ್ಯಾಪ್ ಪ್ರಕರಣ: ಕಿಂಗ್ ಪಿನ್ ಸೇರಿ ನಾಲ್ವರು ಅರೆಸ್ಟ್

Dec 30, 2025 - 10:03
Dec 30, 2025 - 10:03
 0  2.2k
ಮಡಿಕೇರಿ: ಮಂಡ್ಯದ ಮೂಲದ ಉದ್ಯಮಿಗೆ ಹನಿಟ್ರ್ಯಾಪ್ ಪ್ರಕರಣ: ಕಿಂಗ್ ಪಿನ್ ಸೇರಿ ನಾಲ್ವರು ಅರೆಸ್ಟ್
ಫೋಟೋ:ದಿನೇಶ್&ಸುಜಿತ್

ಮಡಿಕೇರಿ, ಡಿ. 29:ಪೊಲೀಸ್ ಕಾನ್ಸಟೇಬಲ್ ಮಾಜಿ ಪತ್ನಿಯ ಮೂಲಕ ಮಂಡ್ಯ ಮೂಲದ ಉದ್ಯಮಿಯನ್ನು ಸೆಳೆದು ಮಡಿಕೇರಿಗೆ ಕರೆಸಿಕೊಂಡು ಆತನ ಮೇಲೆ ಯುವಕರ ತಂಡವೊಂದು ಹಲ್ಲೆಗೈದು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆಯೊಡ್ಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಸೇರಿದಂತೆ ಈ ಪ್ರಕರಣದ ಪ್ರಮುಖ ಸೂತ್ರಧಾರರಿಬ್ಬರನ್ನು ನಗರ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ತಲೆಮರೆಸಿಕೊಂಡಿದ್ದ ಮಡಿಕೇರಿಯ ಆಟೋ ಚಾಲಕ ಸುಜಿತ್ ಹಾಗೂ ಸರ್ವಿಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಸೇರಿದಂತೆ ಮೂಲತಃ ಮಡಿಕೇರಿಯ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದ ಪ್ರವೀಣ್, ಬೆಳ್ತಂಗಡಿ ಮೂಲದ, ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದ ಸುದರ್ಶನ್ ಎಂಬವರನ್ನು ಪೊಲೀಸರು ಇದೀಗ ಈ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇದೀಗ ಎಂಟಕ್ಕೇರಿದೆ.

What's Your Reaction?

Like Like 3
Dislike Dislike 0
Love Love 1
Funny Funny 1
Angry Angry 0
Sad Sad 1
Wow Wow 1