ಮಡಿಕೇರಿ;ಏ.08ರಂದು ಕಲಾಕಾವ್ಯ ನಾಟ್ಯಶಾಲೆ ವತಿಯಿಂದ ಕಲಾ‌ ಕಾವ್ಯ ಯಕ್ಷಗಾನ

ಮಡಿಕೇರಿ;ಏ.08ರಂದು ಕಲಾಕಾವ್ಯ ನಾಟ್ಯಶಾಲೆ ವತಿಯಿಂದ ಕಲಾ‌ ಕಾವ್ಯ ಯಕ್ಷಗಾನ

ಮಡಿಕೇರಿ: ನೃತ್ಯ ಗುರುಗಳು ಕಲಾಕಾವ್ಯ ನಾಟ್ಯಶಾಲೆ ಮಡಿಕೇರಿ ವತಿಯಿಂದ ಏ.೮ರಂದು ಕಲಾ ಕಾವ್ಯ ಯಕ್ಷಗಾನ ವೈಭವ ನಗರದ ಮೈತ್ರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ತಿಳಿಸಿದರು.

ಅಂದು ಮಧ್ಯಾಹ್ನ ೧ ಗಂಟೆಗೆ ಕಲಾಕಾವ್ಯ ನಾಟ್ಯ ಶಾಲೆಯ ಮಕ್ಕಳಿಂದ ಶ್ರೀದೇವಿ ಮಹಾತ್ಮ ಮತ್ತು ವೀರ ಅಭಿಮನ್ಯು ಎಂಬ ಯಕ್ಷಗಾನ ಕಥಾ ಬಯಲಾಟ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಗುರು ಬಾಲಕೃಷ್ಣ ನಾಯರ್ ನೆರವೇರಿಸಲಿದ್ದಾರೆ.

ನಿವೃತ್ತ ಆಕಾಶವಾಣಿ ಉದ್ಯೋಷಕ ಸುಬ್ರಾಯ ಸಂಪಾಜೆ, ಸವನೂರಿನ ಶ್ರವಣರಂಗ ಪ್ರತಿಷ್ಠಾನದ ಯಕ್ಷಗಾನ ಗುರು ತಾರಾನಾಥ್ ಸವಣೂರು, ಬಾಲ ಭವನ ಅಧ್ಯಕ್ಷ ರವೀಂದ್ರ ರೈ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಲಾಕಾವ್ಯ ನಾಟ್ಯ ಶಾಲೆಯ ವಿದ್ಯಾರ್ಥಿ ಹಾಗೂ ಪ್ರೊಫೆಸರ್ ಡಾ.ಶೈಲಾಶ್ರೀ, ಚಂದ್ರವತಿ, ಇಂಚರ, ಪ್ರೀತು ಗಯಾ, ಗಾನಶ್ರೀ ಇದ್ದರು.