ಮಾ.31ರಂದು ಮಡಿಕೇರಿ ಕೊಡವ ಸಮಾಜದ ವತಿಯಿಂದ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬ ಆಚರಣೆ
admincoorgdaily

ಮಡಿಕೇರಿ: ಪದ್ಮ ಭೂಷಣ ಜನರಲ್ ತಿಮ್ಮಯ್ಯನವರ 120ನೇ ಹುಟ್ಟು ಹಬ್ಬವನ್ನು ಕೊಡವ ಸಮಾಜ ಮಡಿಕೇರಿ ವತಿಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಎಂ.ಮುತ್ತಪ್ಪ ತಿಳಿಸಿದ್ದಾರೆ.
ಕಳೆದ ಬಾರಿ ಪ್ರತಿಮೆಗೆ ಹಾನಿಯಾದ ಸಂದರ್ಭ ದುರಸ್ತಿ ಮಾಡಲು ಮುತುವರ್ಜಿ ಜಿಲ್ಲಾಡಳಿತ ನಗರಸಭೆಯೊಂದಿಗೆ ಸಹಕರಿಸಿ ಪುರ್ನನಿರ್ಮಾಣವನ್ನು ಮಾಡಲಾಯಿತ್ತು. ಈ ಬಾರಿ ಮಾ.31ರಂದು ಬೆಳಗ್ಗೆ 10.30 ಗಂಟೆಗೆ ತಿಮ್ಮಯ್ಯ ವೃತ್ತದಲ್ಲಿ ಸೇನಾನಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಗುವುದು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ನಿವೃತ್ತ ಸೇನಾನಿ ಕರ್ನಲ್ ಮುಲ್ಲೇರ ಕಾವೇರಪ್ಪ ಅವರು ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ನಂತರ 11 ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ಸಭಾಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೆ.ಎ.ದೇವಯ್ಯ, ಅಪ್ಪಣ್ಣ, ಸದಾಮುದ್ದಪ್ಪ, ಸರಳ ಕರುಂಬಯ್ಯ ಉಪಸ್ಥಿತರಿದ್ದರು.