ಮಡಿಕೇರಿ:ನಗರಸಭೆ ಮುಂಭಾಗ ಎಸ್‌ಡಿಪಿಐ ಪ್ರತಿಭಟನೆ

Feb 25, 2026 - 17:07
 0  648
ಮಡಿಕೇರಿ:ನಗರಸಭೆ ಮುಂಭಾಗ ಎಸ್‌ಡಿಪಿಐ ಪ್ರತಿಭಟನೆ

ಮಡಿಕೇರಿ: ತ್ಯಾಗರಾಜ ಕಾಲನಿ, ಹಿಲ್ ರಸ್ತೆ, ತೆನಲ್ ಆಶ್ರಮ ದಾರಿ, ಉಕ್ಕುಡರಸ್ತೆ, ಖಾಸಗಿ ಬಸ್ ನಿಲ್ದಾಣ ರಸ್ತೆ, ಕಾವೇರಿ ಕಲಾಕ್ಷೇತ್ರ ಅಭಿವೃದ್ಧಿ ಕಾಮಗಾರಿಗಳು ನಗರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ನಗರಸಭೆ ಮುಂಭಾಗ ಜಮಾಯಿಸಿದ ಎಸ್‌ಡಿಪಿಐ ಸದಸ್ಯರು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

 ಪಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ನಗರದಲ್ಲಿ ಸಾಕಷ್ಟು ಕಾಮಗಾರಿಗಳು ನಗರಸಭೆಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಈ ಹಿನ್ನೆಲೆ ನಗರಸಭೆ ಆಡಳಿತ ಮಂಡಳಿ ವೈಫಲ್ಯ ಖಂಡಿಸಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಅಲ್ಲದೇ ೮ ತಿಂಗಳ ಆಡಳಿತದಲ್ಲಿ ೪ ಸಭೆ ಕರೆಯಲಾಗಿದೆ. ಸ್ಥಾಯಿ ಸಮಿತಿ ಸಭೆ ಇರುವರೆಗೆ ನಡೆದಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಭೇಟಿ ಅಹವಾಲು ಆಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಉಪಾಧ್ಯಕ್ಷ ಮನ್ಸೂರ್ ಅಲಿ, ಸದಸ್ಯರಾದ ಅಬ್ದುಲ್ ಅಡ್ಕಾರ್, ನೀಮ ಹರ್ಷದ್ ಹಾಗೂ ಎಸ್‌ಡಿಪಿಐ ಸದಸ್ಯರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0