ಮಡಿಕೇರಿ: ಆಲ್ ಮರ ನಡ್,ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕದ್ವಯರು
admincoorgdaily
ಮಡಿಕೇರಿ:ಕೊಡವ ಸಮಾಜ ಮಡಿಕೇರಿ ಅವರು ಆಯೋಜಿಸಿದ ಆಲ್ ಮರ ನಡ್'ಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಬಳಿ ಇರುವ ಕೋಲ್ ಮಂದ್ ಜಾಗದಲ್ಲಿ ಸಸಿ ನೆಟ್ಟರು.
ಈ ಸಂದರ್ಭದಲ್ಲಿ ಮಡಿಕೇರಿ ಶಾಸಕರು ಮಂತರ್ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷರಾದ ಮಂಡುವಂಡ ಪಿ ಮುತ್ತಪ್ಪ, ಸದಸ್ಯರು ಪದಾಧಿಕಾರಿಗಳು, ನಾಪೋಕು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ತೆನ್ನಿರ ಮೈನಾ,ಆಹ್ವಾನಿತ ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.