Kodagu

ಮಡಿಕೇರಿ: ವಾಂಡರ್ಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಏ.1 ರಿಂದ ಮೇ.1ರವರೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 32ನೇ ವರ್ಷದ ಉಚಿತ ಬೇಸಿಗೆ ಶಿಬಿರ

admincoorgdaily

ಮಡಿಕೇರಿ: ವಾಂಡರ್ಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಏ.1 ರಿಂದ ಮೇ.1ರವರೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 32ನೇ ವರ್ಷದ ಉಚಿತ ಬೇಸಿಗೆ ಶಿಬಿರ

ಮಡಿಕೇರಿ:ಇಲ್ಲಿನ ವಾಂಡರ್ಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಏ.೧ ರಿಂದ ಮೇ.೧ರವರೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ೩೨ನೇ ವರ್ಷದ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಕೋಟೇರ ಎನ್.ಮುದ್ದಯ್ಯ ತಿಳಿಸಿದ್ದಾರೆ.

 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಶಿಬಿರದಲ್ಲಿ ೬ ವರ್ಷದಿಂದ ೧೬ ವರ್ಷದ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಶಿಬಿರದಲ್ಲಿ ಬಾಲಕ, ಬಾಲಕಿರಿಗೆ ಹಾಕಿ, ಯೋಗ ಹಾಗೂ ಅಥ್ಲೇಟಿಕ್ಸ್‌ಗೆ ಸಂಬಂಧಿಸಿದಂತೆ ನುರಿತ ತರಬೇತುದಾರರಿಂದ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ ೬.೩೦ ಗಂಟೆಯಿಂದ ಬೆಳಗ್ಗೆ ೮.೩೦ ಗಂಟೆಯವರೆಗೆ ತರಬೇತಿ ನೀಡಲಾಗುತ್ತದೆ. ಏ.೧ ರಂದು ದಿ.ಸಿ.ವಿ.ಶಂಕರ್ ಸ್ವಾಮಿ ಜನ್ಮದಿನಾಚರಣೆಯಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

 ಶಿಬಿರದಲ್ಲಿ ನುರಿತರಿಂದ ಉಪನ್ಯಾಸ ನೀಡಲಾಗುತ್ತದೆ. ಅಲ್ಲದೇ, ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ನಡುವೆ ತಂಡಗಳನ್ನು ರಚಿಸಿ ಹಾಕಿ, ಅಥ್ಲೆಟಿಕ್ಸ್ ನಲ್ಲಿ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಗುವುದು. ಜತೆಗೆ ವಾಂಡರ್ಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಸಂಚಾಲಕರಾದ ಬಾಬು ಸೋಮಯ್ಯ, ಕ್ಲಬ್‌ನ ಪ್ರಮುಖರಾದ ಬೊಪ್ಪಂಡ ಶ್ಯಾಂ, ಕುಡೆಕಲ್ ಸಂತೋಷ್, ಟಿ.ವಿ.ಲೋಕೇಶ್ ಇದ್ದರು.