ಮೊಬೈಲ್ ಕಸಿದು ಓಡಿದ, ಕ್ಷಣದಲ್ಲೇ ಕುಸಿದು ಸಾವು
ಬೆಂಗಳೂರು, ಜೂನ್ 19: ಮೊಬೈಲ್ ಕಸಿದು ಸ್ಕೂಟಿಯಲ್ಲಿ ಪರಾರಿಯಾಗಲು ಯತ್ನಿಸಿದ ಕ್ಷಣದಲ್ಲೇ ವ್ಯಕ್ತಿಯೊಬ್ಬರು ಕುಸಿದು ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜುನೈದ್ ಎಂಬಾತ ವ್ಯಕ್ತಿಯೊಬ್ಬರ ಮೊಬೈಲ್ ಕಸಿದು ಸ್ಕೂಟಿಯಲ್ಲಿ ಪರಾರಿಯಾಗುತ್ತಿದ್ದ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರ್ಮಿಕ ಆತನತ್ತ ಮೂಟೆಯನ್ನು ಎಸೆದಿದ್ದು, ನಿಯಂತ್ರಣ ತಪ್ಪಿ ಬಿದ್ದ ಜುನೈದ್ ಅಲ್ಲಿಂದ ಎದ್ದು ಓಡಿದ್ದಾನೆ. ಫುಟ್‌ಪಾತ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಆತ ಕುಸಿದು ಬಿದ್ದಾನೆ. ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜುನೈದ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಘಟನೆಯಲ್ಲಿ ಮತ್ತೋರ್ವ ಆರೋಪಿ ಅರ್ಬಾಜ್‌ನನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
What's Your Reaction?
Like
5
Dislike
1
Love
1
Funny
0
Angry
0
Sad
1
Wow
1
