ಆಮ್ಲೆಟ್ ಗಂಟಲಲ್ಲಿ ಸಿಲುಕಿ ವ್ಯಕ್ತಿ ದುರ್ಮರಣ

Sep 22, 2025 - 20:12
Sep 22, 2025 - 20:12
 0  992
ಆಮ್ಲೆಟ್ ಗಂಟಲಲ್ಲಿ ಸಿಲುಕಿ ವ್ಯಕ್ತಿ ದುರ್ಮರಣ
Photo credit: cooking with thas

ಕಾಸರಗೋಡು: ಆಮ್ಮೆಟ್ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ಬದಿಯಡ್ಕ ಚುಳ್ಳಿಕ್ಕಾನ ನಿವಾಸಿ, ಪ್ರಸಕ್ತ ಬಾರಡ್ಕದಲ್ಲಿ ವಾಸವಿದ್ದ ವಿನ್ಸೆಂಟ್ ಕ್ರಾಸ್ತಾ(52) ಮೃತಪಟ್ಟವರು. ಅವರು ರವಿವಾರ ಸಂಜೆ ಮನೆ ಸಮೀಪದ ಗೂಡಂಗಡಿಯಿಂದ ಆಮೈಟ್ ಸೇವಿಸುತ್ತಿದ್ದಾಗ ಘಟನೆ ನಡೆದಿದೆ. ಆಮ್ಮೆಟ್ ಗಂಟಲಲ್ಲಿ ಸಿಲುಕಿ ಒದ್ದಾಡುತ್ತಿದ್ದ ವಿನ್ಸೆಂಟ್ ರನ್ನು ತಕ್ಷಣ ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು. ಬೇಳ ಕಟ್ಟತ್ತಂಗಡಿ ಎಂಬಲ್ಲಿ ವೆಲ್ಡಿಂಗ್ ಶಾಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿನ್ಸೆಂಟ್ ಕ್ರಾಸ್ತಾ ಅವಿವಾಹಿತರಾಗಿದ್ದರು. ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿ ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0