ಈದ್ ಮಿಲಾದ್ ಪ್ರಯುಕ್ತ ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ಸಿರಾಜುಲ್ ಹುದಾ ಮಸೀದಿ ಸದಸ್ಯರಿಂದ ಸ್ವಚ್ಛತಾ ಶ್ರಮದಾನ

Aug 24, 2026 - 19:27
 0  69
ಈದ್ ಮಿಲಾದ್ ಪ್ರಯುಕ್ತ ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ಸಿರಾಜುಲ್ ಹುದಾ ಮಸೀದಿ ಸದಸ್ಯರಿಂದ ಸ್ವಚ್ಛತಾ ಶ್ರಮದಾನ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1501ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ಸಿರಾಜುಲ್ ಹುದಾ ಮಸೀದಿಯ ಸದಸ್ಯರಿಂದ ಸ್ವಚ್ಛತಾ ಶ್ರಮಾಧಾನ ನಡೆಸಲಾಯಿತು.

 ಕಲ್ಲುಮೊಟ್ಟೆ ಸಮುದಾಯ ಭವನದ ಆವರಣದಿಂದ ಚೆರಿಯಪರಂಬು, ನಾಪೋಕ್ಲುಪಟ್ಟಣಕ್ಕೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ಕಾಡು, ಗಿಡಗಂಟಿಗಳು ಬೆಳೆದು ರಸ್ತೆಗೆ ಆವರಿಸಿಕೊಂಡು ಸಾರ್ವಜನಿಕರ ಹಾಗೂ ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗಿತ್ತು. ಇದನ್ನು ಮನಗಂಡ ಮಸೀದಿಯ ಸದಸ್ಯರು ರಸ್ತೆಯ ಎರಡು ಬದಿಗಳ ಕಾಡುಗಳನ್ನು ಕಡಿದು ಚೆರಂಡಿಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ಈ ರಸ್ತೆಯ ಎರಡು ಬದಿಗಳಲ್ಲಿ ಕಾಡುಗಳು ಬೆಳೆದು ರಸ್ತೆಗೆ ಆವರಿಸಿ ಗ್ರಾಮಸ್ಥರ ಹಾಗೂ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಅಲ್ಲದೆ ಈ ರಸ್ತೆಯ ಬದಿಯಲ್ಲಿರುವ ತೋಟದ ಬೇಲಿಗಳು ಬೆಳೆದು ರಸ್ತೆಗೆ ಆವರಿಸಿಕೊಂಡಿದ್ದರು ಕೂಡ ತೋಟದ ಮಾಲೀಕರು ಯಾವುದೇ ತೆರವು ಕಾರ್ಯನಡೆಸುವುದಿಲ್ಲ. ಅಲ್ಲದೆ ಸಂಬಂಧಪಟ್ಟ ಪಂಚಾಯಿಗೆ ಈ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರು ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಪ್ರತಿ ವರ್ಷದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ವರ್ಷವೂ ಕೂಡ ನಾವೆಲ್ಲರೂ ಸ್ವಚ್ಛತಾ ಕಾರ್ಯಕ್ರಮದ ಮೂಲಕ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸುತ್ತಾ ಬಂದಿದ್ದೇವೆ.

ಇನ್ನಾದರೂ ಸಂಬಂಧಪಟ್ಟ ತೋಟದ ಮಾಲೀಕರು ಹಾಗೂ ಪಂಚಾಯತಿಯವರು ಮೂರು ತಿಂಗಳಿಗೊಮ್ಮೆ ರಸ್ತೆಗೆ ಆವರಿಸುವ ತೋಟದ ಬೇಲಿಯ ಕೊಂಬೆಗಳನ್ನು ಹಾಗೂ ಚೆರಂಡಿಗಳನ್ನು ಸ್ವಚ್ಛಗೊಳಿಸಬೇಕಾಗಿದೆ ಎಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡವರು ಆಗ್ರಹಿಸಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ಸಿರಾಜುಲ್ ಹುದಾ ಜಮಾ ಮಸೀದಿ ಅಧ್ಯಕ್ಷ ಪುಲಿಯಂಡ ಮಹಮ್ಮದ್,ಸ್ವಲಾತ್ ಸಮಿತಿ ಅಧ್ಯಕ್ಷ ಪೀರು ಸಾಹೇಬ್, ಸದಸ್ಯರಾದ ಝಕರಿಯ ಪಿ.ಎಂ., ಆಸಿಫ್, ಸೌಕತ್, ಸಿದ್ದೀಕ್, ಸಂಶುದ್ದೀನ್, ಇಸ್ಹಾಕ್, ಅಬು ತಾಹಿರ್, ಸೌಕತ್, ಬಷೀರ್, ಸೇರಿದಂತೆ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0