ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಗೆ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಸಚಿವರು ಹಾಗೂ ಶಾಸಕರು

Nov 20, 2025 - 21:35
 0  343
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಗೆ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಸಚಿವರು ಹಾಗೂ ಶಾಸಕರು

ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಗೆ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ಸೋಮವಾರಪೇಟೆ ತಾಲ್ಲೂಕಿನ ಹಂಡ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕೆ ಸೃಷ್ಟಿ ಹಾಗೂ ಕುಶಾಲನಗರ ತಾಲ್ಲೂಕಿನ ಶಿರಂಗಾಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಬಿ ಪಿ ಪ್ರಣಯ್ ರವರು ಇಂದು ವಿಧಾನ ಸಭೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ನಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಭೋಸರಾಜು ರವರು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ "ನಾವು ಪ್ರತಿಷ್ಠಾನದ" ಸಂಸ್ಥಾಪಕರಾದ ಶ್ರೀ ಗೌತಮ್ ಕಿರಗಂದೂರು, ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಜಿಲ್ಲಾ ಸಂಯೋಜಕಿಯರಾದ ಶ್ರೀಮತಿ ಸುಮನ್ ಮ್ಯಾಥ್ಯು ರವರು, ನಾವು ಪ್ರತಿಷ್ಠಾನದ ಸುಬಾನ್ ವಿದ್ಯಾರ್ಥಿಗಳ ಜೊತೆಗೆ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0