Kodagu

ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು ಶವ ಪತ್ತೆ; ಶಿವರಾಜುಗಾಗಿ ಶೋಧ ಕಾರ್ಯ ಮುಂದುವರಿಕೆ

admincoorgdaily

ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು ಶವ ಪತ್ತೆ; ಶಿವರಾಜುಗಾಗಿ ಶೋಧ ಕಾರ್ಯ ಮುಂದುವರಿಕೆ

ಕೊಡ್ಲಿಪೇಟೆ:ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ನಾಗರಾಜು ಎಂಬವರ ಶವ ನದಿಯಲ್ಲಿ 1 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಮುಂಜಾನೆ NDRF ತಂಡ ಶೋಧ ಕಾರ್ಯ ಆರಂಭಿಸಿದ ಅರ್ಧ ಗಂಟೆಯಲ್ಲೇ ನಾಗರಾಜು ಅವರ ಮೃತದೇಹ ಪತ್ತೆಯಾಗಿದೆ.

ಅವರೊಂದಿಗೆ ನಾಪತ್ತೆಯಾಗಿದ್ದ ಶಿವರಾಜು ಅವರಿಗಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಶಾಸಕ ಮಂತರ್ ಗೌಡ ಭೇಟಿ ನೀಡಿ NDRF ಶೋಧ ಕಾರ್ಯವನ್ನು ವೀಕ್ಷಿಸಿದರು. ಬಳಿಕ ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.