ಎಂಟು ದಿನದ ಹಸುಗೂಸು, ಅಂಗವಿಕಲ ಮಗು ಕೊಂ*ದು ಬಾಣಂತಿ ಆತ್ಮ*ಹ*ತ್ಯೆ

Nov 2, 2025 - 11:24
 0  2.6k
ಎಂಟು ದಿನದ ಹಸುಗೂಸು, ಅಂಗವಿಕಲ ಮಗು ಕೊಂ*ದು ಬಾಣಂತಿ ಆತ್ಮ*ಹ*ತ್ಯೆ
Photo credit: Public Tv

ಮೈಸೂರು, ನ. 2: ಕೇವಲ ಎಂಟು ದಿನದ ಹಿಂದಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದ 21 ವರ್ಷದ ಬಾಣಂತಿ, ತನ್ನ ಇಬ್ಬರು ಹೆಣ್ಣುಮಕ್ಕಳನ್ನೇ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಸಂಭವಿಸಿದೆ. 

ಮೃತಳನ್ನು ಬೆಟ್ಟದಪುರದ ಮುಸ್ಲಿಂ ಬ್ಲಾಕ್ ನಿವಾಸಿ ರಾಬಿಯಾ ಭಾನು (21) ಎಂದು ಗುರುತಿಸಲಾಗಿದೆ. ಆಕೆಗೆ ಅನಮ್ ಫಾತಿಮಾ (2) ಎಂಬ ಅಂಗವಿಕಲ ಮಗಳು ಹಾಗೂ ಕೇವಲ ಎಂಟು ದಿನದ ಹೆಣ್ಣುಮಗು ಇತ್ತು. ತವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ಮಕ್ಕಳ ಕತ್ತು ಕೊಯ್ದು, ಬಳಿಕ ರಾಬಿಯಾ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಬೆಟ್ಟದಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ರಾಬಿಯಾ ಭಾನು ಅವರ ಮೊದಲ ಮಗಳು ಅಂಗವಿಕಲಳಾಗಿದ್ದಳು. ಮತ್ತೆ ಹೆಣ್ಣು ಮಗು ಜನಿಸಿದ ಹಿನ್ನೆಲೆ ಕುಟುಂಬದಲ್ಲಿ ಮಾನಸಿಕ ಒತ್ತಡ ಎದುರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ರಾಬಿಯಾ ಭಾನು ಕೆಲ ತಿಂಗಳಿನಿಂದ ಖಿನ್ನತೆಯಲ್ಲಿ ಇದ್ದರು ಎನ್ನುವ ಮಾಹಿತಿ ಸ್ಥಳೀಯರಿಂದ ದೊರೆತಿದೆ.

ಪ್ರಕರಣ ದಾಖಲಿಸಿಕೊಂಡ ಬೆಟ್ಟದಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 5
Sad Sad 13
Wow Wow 0