ನಾಲ್ಕು ಮಕ್ಕಳ ತಾಯಿಯ ಹತ್ಯೆ; ಆಟೋದಲ್ಲಿ ಮೃತದೇಹ ಬಿಟ್ಟು ಪರಾರಿಯಾದ ಪ್ರಿಯಕರ | ಪತಿ ಮೃತಪಟ್ಟ ಬಳಿಕ ಚಿಗುರಿದ್ದ ಪ್ರೇಮ ಸಂಬಂಧ

Oct 26, 2025 - 22:04
 0  2.8k
ನಾಲ್ಕು ಮಕ್ಕಳ ತಾಯಿಯ ಹತ್ಯೆ; ಆಟೋದಲ್ಲಿ ಮೃತದೇಹ ಬಿಟ್ಟು ಪರಾರಿಯಾದ ಪ್ರಿಯಕರ  | ಪತಿ ಮೃತಪಟ್ಟ ಬಳಿಕ ಚಿಗುರಿದ್ದ ಪ್ರೇಮ ಸಂಬಂಧ
Photo credit: TV09

ಬೆಂಗಳೂರು, ಅ.25: ನಾಲ್ಕು ಮಕ್ಕಳ ತಾಯಿಯನ್ನು ಕ್ರೂರವಾಗಿ ಕೊಲೆ ಮಾಡಿ ಶವವನ್ನು ಆಟೋದಲ್ಲಿ ಬಿಟ್ಟು ಪರಾರಿಯಾದ ಭೀಕರ ಘಟನೆ ಬೆಂಗಳೂರಿನ ತಿಲಕ್‌ನಗರ ಮುಖ್ಯರಸ್ತೆಯಲ್ಲಿ ನಡೆದಿದೆ.

ಮೃತರನ್ನು ಸಲ್ಮಾ (35) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಸುಬ್ಬುಮಣಿಯು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. 

ಸಾರ್ವಜನಿಕರು ಆಟೋದಲ್ಲಿ ಶವವಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಘಟನೆ ಬೆಳಕಿಗೆ ಬಂದಿದೆ. ತಿಲಕ್‌ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಸಲ್ಮಾ ಪತಿ ಮೃತಪಟ್ಟ ನಂತರ, ಅವರು ಸುಬ್ಬುಮಣಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದರು. ಕಳೆದ ರಾತ್ರಿ ಇವರಿಬ್ಬರ ನಡುವೆ ಉಂಟಾದ ವಾಗ್ವಾದದ ವೇಳೆ ಸುಬ್ಬುಮಣಿಯು ಸಲ್ಮಾರ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ನಂತರ ಶವವನ್ನು ಬಟ್ಟೆಯಿಂದ ಸುತ್ತಿ ಆಟೋದಲ್ಲಿ ಬಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ತಿಲಕ್‌ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಲ್ಮಾಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಆರೋಪಿ ಸುಬ್ಬುಮಣಿಯ ಪತ್ತೆಗೆ ತಿಲಕ್‌ನಗರ ಠಾಣೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 0
Sad Sad 2
Wow Wow 0