ನಾಪೋಕ್ಲು; ಶ್ರೀಪೊನ್ನು ಮುತ್ತಪ್ಪ ದೇವಾಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಎ.ಕೆ. ಚಂದ್ರನ್ ನೇಮಕ

ನಾಪೋಕ್ಲು; ಶ್ರೀಪೊನ್ನು ಮುತ್ತಪ್ಪ ದೇವಾಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಎ.ಕೆ. ಚಂದ್ರನ್ ನೇಮಕ
ಅಧ್ಯಕ್ಷ ಮತ್ತು ಪ್ರ.ಕಾರ್ಯದರ್ಶಿ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು: ಇತಿಹಾಸ ಪ್ರಸಿದ್ಧ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯಕ್ಕೆ 2026 -27 ನೇ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಅಧ್ಯಕ್ಷರಾಗಿ ಎ.ಕೆ.ಚಂದ್ರನ್ ಅವರು ನೇಮಕವಾಗಿದ್ದಾರೆ. ದೇವಾಲಯದ ಸುಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯಲ್ಲಿ ಭಕ್ತಾದಿಗಳ ಹಾಗೂ ಪ್ರಮುಖರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಕೆ.ಅನಿಲ್,ಉಪಾಧ್ಯಕ್ಷರಾಗಿ ಎಂ.ಕೆ.ತಂಗ,ಸಹ ಕಾರ್ಯದರ್ಶಿಯಾಗಿ ಟಿ. ಕೆ.ಸುಕುಮಾರ್,ಕೋಶಾಧಿಕಾರಿಯಾಗಿ ಮಹೇಶ್ ಮೇನೋನ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಆಡಳಿತ ಮಂಡಳಿಯ ಸದಸ್ಯರುಗಳಾಗಿ ಕೆ.ಕೆ.ವಿಜಯ ಕೆ.ಕೆ.ಅನಿಲ್, ಎಂ. ಪಿ. ಹರಿದಾಸ್,ಪಿ.ವಿ.ಅನಿಲ್ ಪಿ.ಕೆ.ಸುನಿಲ್,ಟಿ.ಕೆ. ರಘು ಟಿ. ಆರ್ ಮೋನಿಶ್,ಎ.ವಿ.ಸತೀಶ್, ಎ. ಕೆ.ಮಹೇಶ್,ಸತೀಶ್,ಟಿ. ಎಂ.ಸುನಿಲ್, ಸಂದೇಶ್, ಎ.ಎಂ. ಚೇತನ್, ಪ್ರಕಾಶ್ ಪಟ್ಟಾಭಿ ಅವರುಗಳು ಆಯ್ಕೆಯಾದರು. ಮುಂಬರುವ ವರ್ಷದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಈತನ ತಂಡವು ಮುನ್ನಡೆಸಲಿದೆ.