ಹುದಿಕೇರಿಯಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Mar 30, 2026 - 10:09
 0  173
ಹುದಿಕೇರಿಯಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪೊನ್ನಂಪೇಟೆ;ತಾಲೂಕಿನಹುದಿಕೇರಿ ಗ್ರಾಮದಲ್ಲಿ ₹ 27 ಲಕ್ಷದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿವಿಧ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆಯನ್ನು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

 ಬಳಿಕ ಚೆಕ್ಕೇರ ಐನ್ ಮನೆಗೆ ಭೇಟಿ ನೀಡಿ, ಕುಟುಂಬದವರ ಸನ್ಮಾನ ಸ್ವೀಕರಿಸಿದರು. ಕ್ಷೇತ್ರ ಪ್ರವಾಸದಲ್ಲಿರುವ ಮಾನ್ಯ ಶಾಸಕರು ಹುದಿಕೇರಿಗೆ ಆಗಮಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಬಳಿಕ, ನೂತನವಾಗಿ ನಿರ್ಮಾಣಗೊಂಡಿರುವ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಹಿರಿಯರು ಚೆಕ್ಕೇರ ವಾಸು ಕುಟ್ಟಪ್ಪ, ಪೆಮ್ಮಂಡ ಪೊನ್ನಪ್ಪ, ಮುಕಳೇರ ಕುಶಾಲಪ್ಪ, ಯೂತ್ ಅಧ್ಯಕ್ಷರು ರೀಕ್ಷಿತ್ ಕಾರ್ಯಪ್ಪ, ಮದನ್ ಮಂದಣ್ಣ, ಚೆಕ್ಕೇರ ಸುಧಿ, ಬಿಪಿನ್, ಅಜ್ಜಿಕುಟ್ಟಿರ ಗಿರೀಶ್, ಅಜ್ಜಿಕುಟ್ಟಿರ ಪಮ್ಮು ರೋನಿ, ಕಾವೇರಪ್ಪ, ಕರುಂಬಯ್ಯ,ಮಧು ತಮ್ಮಯ್ಯ, ನೊರೇರ ಕಿಟ್ಟು, ಮಚ್ಚಮಾಡ ಮನು, ಸಿದ್ದು ನಾಚಪ್ಪ, ಮನು, ಹಾಗೂ ಪ್ರಮುಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0